Slider

ಸ್ಯಾಮ್ಸಂಗ್ ಅವರ ಗ್ಯಾಲಕ್ಸಿ ಎ73 5ಜಿ ಹೇಗಿದೆ?


 ಸ್ಯಾಮ್ಸಂಗ್ ಅವರ ಗ್ಯಾಲಕ್ಸಿ ಎ73 5ಜಿ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಪ್ರಿಮಿಯಂ 5ಜಿ ಫೋನ್ ವಿಶಿಷ್ಟತೆ ಏನು? ಬನ್ನಿ ನೋಡೋಣ.

ಚಿತ್ರಕೃಪೆ: ಸ್ಯಾಮ್ಸಂಗ್

{tocify} $title={ವಿಷಯ ಸೂಚಿ}

ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನುಗಳು ಹಲವು ಶ್ರೇಣಿಯಲ್ಲಿ ಮುಖ್ಯವಾಗಿ ಇವೆ. ಝೀ, ಎಸ್, ಎಂ ಹಾಗೂ ಎ ಸಿರೀಸ್ ಗಳು. ಝೀ ಮತ್ತು ಎಸ್ ಸಿರೀಸ್ ಗಳು ಅಲ್ಟ್ರಾ ಪ್ರಿಮಿಯಂ ಹಾಗೂ ಪ್ರಿಮಿಯಂ ರೇಂಜ್ ಆದರೆ, ಎ, ಎಫ್ ಹಾಗೂ ಎಂ ಸಿರೀಸ್ ಗಳು ಆರಂಭಿಕ, ಬಜೆಟ್, ಮಧ್ಯಮ, ಪ್ರಿಮಿಯಂ ಶ್ರೇಣಿಗಳ ಫೋನ್ ಹೊಂದಿರುತ್ತವೆ.

ಇವು 0*, 1*, 2*, 3*, 4*, 5*, 7* ರೇಂಜ್ ಅಲ್ಲಿ ಲಭ್ಯ ಇದ್ದು, 0* ಆರಂಭಿಕ ಶ್ರೇಣಿ ಆದರೆ 5* ಮತ್ತು 7* ಇವು ಮಧ್ಯಮ ಹಾಗೂ ಪ್ರಿಮಿಯಂ ಶ್ರೇಣಿಯ ಫೋನ್ ಆಗಿವೆ.

ಉದಾಹರಣೆಗೆ ಗ್ಯಾಲಕ್ಸಿ ಎ ಶ್ರೇಣಿಯಲ್ಲಿ A03, A13, A23, A33, A43, A53, A73 ಫೋನ್ ಗಳು ಇರಲಿವೆ. ಇದೇ ಮಾರ್ಚ್ 17 2022ರಂದು A33, A53 ಮತ್ತು A73 ಘೋಷಿಸಲಾಗಿದೆ. ಇವೆಲ್ಲವೂ ಮಾರುಕಟ್ಟೆಯಲ್ಲಿ ಇವೆ.

ಎ73 5ಜಿ ಎ ಶ್ರೇಣಿಯಲ್ಲಿ ಅತಿ ಉನ್ನತ ಫೋನ್ ಆಗಿದ್ದು ಇದರಲ್ಲಿ ಹೆಚ್ಚಿನ ಎಲ್ಲ ಫೀಚರ್ ಇದೆ. ಇದು ಎಸ್ ಸಿರೀಸ್ ನ ಹಾಗೆ ಇದರಲ್ಲಿ ಫ್ಲ್ಯಾಗ್ ಶಿಪ್ ಚಿಪ್ ಇಲ್ಲ. ಆದರೆ 40 ಸಾವಿರ ರೆಂಜ್ ಬೆಲೆಯಲ್ಲಿ ಹಣಕ್ಕೆ ತಕ್ಕ ಮೌಲ್ಯ ಎನ್ನ ಬಹುದು.

ಅಕಸ್ಮಾತ್ ನೀವು ಅಲ್ಟ್ರಾ ಪ್ರಿಮಿಯಂ ಫೋನ್ ಹುಡುಕುತ್ತಿದ್ದರೆ ಐಫೋನ್ ಸ್ಟೋರ್ ಹಾಗೂ ಗ್ಯಾಲಕ್ಸಿ ಎಸ್ ಸ್ಟೋರ್ ಗೆ ಭೇಟಿ ನೀಡಿ.

ಗ್ಯಾಲಕ್ಸಿ ಎ73 5ಜಿಯ ವಿಶಿಷ್ಟತೆ ಏನು? ಕ್ಯಾಮರಾ ಯಾವುದು? ಪರದೆ ಯಾವುದು? ಬನ್ನಿ ನೋಡೋಣ.

ಪ್ರಾಸೆಸರ್

ಇದೂ ಕೂಡಾ ೫ಜಿ ಫೋನ್ ಆಗಿದ್ದು ಸ್ನ್ಯಾಪ್ ಡ್ರಾಗನ್ 778ಜಿ ಯು 5ಜಿ ಮೊಬೈಲ್ ನೆಟ್ ವರ್ಕ್ ಸಪೋರ್ಟ್ ಇರುವ ಪ್ರಾಸೆಸರ್ ಆಗಿದೆ. ಕ್ರ್ಯೋ 670 ಸಿಪಿಯು ಹಾಗೂ ಎಡ್ರಿನೋ 642ಎಲ್ ಜಿಪಿಯು ಇರುವ 6ಎನ್ ಎಂ ಪ್ರಾಸೆಸರ್ ಆಗಿದೆ.

ಇದು ಫ್ಲ್ಯಾಗ್ ಶಿಪ್ ಪ್ರಾಸೆಸರ್ ಅಲ್ಲ. ಆದರೂ ಈ ಫೋನ್ ಚಲಾಯಿಸಲು ಸಾಕು.

ಬ್ಯಾಟರಿ

5000ಎಂ ಎ ಏಚ್ ನ ಬ್ಯಾಟರಿ ಇದ್ದು 25ವ್ಯಾಟ್ ಫಾಸ್ಟ್ ಚಾರ್ಜ್ ಸೌಲಭ್ಯ ಇದೆ. ಟೈಪ್-ಸಿ ಪೋರ್ಟ್ ಇದು ಚಾರ್ಜಿಂಗ್ ಗೆ ಬಳಸುತ್ತದೆ.

ಪರದೆ


6.7 ಇಂಚಿನ ಫುಲ್ ಎಚ್ಡಿ+ (2400 * 1080) ರೆಸೊಲ್ಯೂಶನ್ 393ಪಿಪಿಐ ನ 120 ಹರ್ಟ್ಜ್ ನ 16ಮಿಲಿಯನ್ ಬಣ್ಣಗಳ ಬೆಂಬಲ ಇರುವ ಸೂಪರ್ ಅಮೋಲ್ಡ್ ಪರದೆ ಹೊಂದಿದೆ.

ಈ ಫೋನ್ ಪರದೆಯ ಸುರಕ್ಷತೆಗೆ ಗೋರಿಲ್ಲಾ ಗ್ಲಾಸ್ 5 ಹೊಂದಿದೆ.

ಡಿಸ್ಪ್ಲೆ ದೊಡ್ಡದಾಗಿದ್ದು ವರ್ಣರಂಜಿತವಾಗಿದೆ.

ಇದರಲ್ಲಿ ವೇರಿಯೇಬಲ್ ರೆಫ್ರೆಶ್ ರೇಟ್ ಸೌಲಭ್ಯ ಇಲ್ಲ. ಅದದ್ದರೆ ಬ್ಯಾಟರಿ ಇನ್ನಷ್ಟು ಜಾಸ್ತಿ ಸಮಯ ಇರುತ್ತಿತ್ತು.

ಕ್ಯಾಮೆರಾ


ಹಿಂದೆ 108ಎಂಪಿಯ ಎಫ್/1.8 ಮುಖ್ಯ ಕ್ಯಾಮರಾ ಹಾಗೂ 12ಮೆಗಾ ಪಿಕ್ಸೆಲ್ ನ ವೈಡ್ ಎಂಗಲ್ ಎಫ್/2.2 ಕ್ಯಾಮೆರಾ, 5ಎಂಪಿ ಮ್ಯಾಕ್ರೋ ಎಫ್/2.4 ಕ್ಯಾಮೆರಾ ಮತ್ತು  5ಎಂಪಿ ಆಳ ಎಫ್/2.4 ಕ್ಯಾಮೆರಾ ಗಳಿವೆ.

ಆಪ್ಟಿಕಲ್ ಸ್ಥಿರೀಕರಣ ಇದೆ. ಒಟ್ಟಿನಲ್ಲಿ ಕ್ಯಾಮೆರಾ ಚೆನ್ನಾಗಿದೆ ಎನ್ನಬಹುದು.

ಹಿಂಭಾಗದ ಕ್ಯಾಮೆರಾದಿಂದ 4ಕೆ 30ಪಿ, 1080 ೬೦ಪಿ ವಿಡಿಯೋ ರೆಕಾರ್ಡಿಂಗ್ ಸಾಧ್ಯ.

ಮುಂದೆ 32ಮೆಗಾ ಪಿಕ್ಸೆಲ್ ನ ಸೆಲ್ಫಿ ಕ್ಯಾಮೆರಾ ಇದೆ. ಈ ಕ್ಯಾಮೆರಾದಿಂದ 4ಕೆ 30ಪಿ ವಿಡಿಯೋ ರೆಕಾರ್ಡಿಂಗ್ ಸಾಧ್ಯ. ಈ ತರಹ ಸೌಲಭ್ಯ ವ್ಲಾಗ್ಗಿಂಗ್ ಮುಂತಾದ ಕೆಲಸಗಳಿದೆ ಸೂಕ್ತ.

ಟೆಲೆಫೋಟೋ ಲೆನ್ಸ್ ಇಲ್ಲ. ಇದು ಒಂದು ಮೈನಸ್ ಪಾಯಿಂಟು.

ಬಣ್ಣಗಳು

ತಿಳಿ ಹಸಿರು, ಬಿಳಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿರಲಿದೆ. 

ಸೆನ್ಸರ್ ಗಳು

ಡಿಸ್ಪ್ಲೇ ಫಿಂಗರ್ ಫ್ರಿಂಟ್ ಸೆನ್ಸರ್ ಇದೆ. ಗೈರೋ, ಜಿಯೋಮೆಗ್ನೆಟಿಕ್,ವರ್ಚುವಲ್  ಪ್ರೊಕ್ಸಿಮಿಟಿ, ಎಕ್ಸೆಲೊರೊಮೀಟರ್, ವರ್ಚುವಲ್ ಬೆಳಕಿನ ಸೆನ್ಸರ್ ಹೆಚ್ಚು ಕಡಿಮೆ ಎಲ್ಲ ಸಾಮಾನ್ಯ ಸೆನ್ಸರ್ ಇದರಲ್ಲಿದೆ.

ಸಂಪರ್ಕ

ಎನ್ ಎಫ್ ಸಿ ಇದೆ. 3.5 ಆಡಿಯೋ ಜ್ಯಾಕ್ ಈ ಫೋನ್ ಅಲ್ಲಿ ಇಲ್ಲ. ಡ್ಯುಯಲ್ ಬ್ಯಾಂಡ್ ವೈಫೈ ಇದೆ. ಜಿಪಿ ಎಸ್ ಇದೆ.

ಎರಡು 5ಜಿ ಸಿಮ್  ಸಪೋರ್ಟ್ ಇದೆ. ೫ಜಿ / ೪ಜಿ / ೩ಜಿ/ ೨ಜಿ ಎಲ್ಲ ಸಪೋರ್ಟ್ ಇದೆ. ಆದರೆ ಎರಡನೆ ಸಿಮ್ ಅಥವಾ ಎಸ್ ಡಿ ಕಾರ್ಡ್ ಯಾವುದಾದರೊಂದನ್ನು ಬಳಸಬಹುದು.  ಬ್ಲ್ಯೂಟೂತ್ 5.0 ಇದೆ.

ಸ್ಟೋರೇಜ್ ಮತ್ತು ಮೆಮರಿ

1 ಟೆರ್ರಾ ಬೈಟ್ ವರೆಗಿನ ಮೈಕ್ರೋ ಎಸ್ ಡಿ ಕಾರ್ಡ್ ಅನ್ನು ಈ ಫೋನ್ ಜೊತೆ ಬಳಸಬಹುದು. ಸಿಮ್ ಸ್ಲಾಟ್ ಶೇರ್ಡ್ ಆಗಿದ್ದು ಒಂದೇ ಎರಡನೆಯ ಸಿಮ್ ಅಥವಾ ಮೈಕ್ರೋ ಎಸ್ ಡಿ ಕಾರ್ಡ್ ಬಳಸಬಹುದು. ನಿಮಗೆ ಎರಡು ಸಿಮ್ ಹಾಗೂ ಮೈಕ್ರೋ ಎಸ್ ಡಿ ಒಟ್ಟಿಗೆ ಬಳಸಲಾಗದು.

8ಜಿಬಿ + 128ಜಿಬಿ, 8ಜಿಬಿ + 256ಜಿಬಿ ವರ್ಶನ್ ಗಳಿವೆ.

ಆಕಾರ

181 ಗ್ರಾಂ ತೂಕದ ಈ ಫೋನ್ 163.7ಮಿಲಿ ಮೀ ಎತ್ತರ, 76.1ಮಿಮಿ ಅಗಲ, 7.6 ಮಿಮಿ ದಪ್ಪ ಇದೆ.

ಸಾಫ್ಟವೇರ್

ಅಂಡ್ರಾಯಿಡ್ 12 ಆಧಾರಿತ ಒನ್ ಯುಐ 4.1 ಆಪರೇಟಿಂಗ್ ಸಿಸ್ಟೆಮ್ ಇದೆ. 

ಲಾಭಗಳು

  • ಉತ್ತಮ ಹಿಂದಿನ ಕ್ಯಾಮೆರಾ. 
  • ಉತ್ತಮ ಪರದೆ - ೧೨೦ಹರ್ಟ್ಜ್ ಸೂಪರ್ ಅಮೋಲ್ಡ್ + ಪರದೆ. ವರ್ಣ ರಂಜಿತ ಆಗಿದೆ.
  • ದೊಡ್ಡ ೫೦೦೦ ಎಂಎ ಎಚ್ ಬ್ಯಾಟರಿ
  • ವೇಗದ ಪ್ರಾಸೆಸರ್
  • ೫ಜಿ ಸೌಲಭ್ಯ
  • ಎಲ್ಲ ಸೆನ್ಸರ್ ಗಳು ಇವೆ
  • ಎಸ್ ಡಿ ಕಾರ್ಡ್ ಸಹ ಬಳಸಬಹುದು
  • ಫಾಸ್ಟ್ ಚಾರ್ಜಿಂಗ್ ಇದೆ. 
  • ೪ಕೆ ವಿಡಿಯೋ ರೆಕಾರ್ಡಿಂಗ್ ಮುಂದಿನ ಹಾಗೂ ಹಿಂದಿನ ಕ್ಯಾಮೆರಾ ಎರಡರಲ್ಲೂ ಸಾಧ್ಯ. ಹೆಚ್ಚಿನ ಫೋನ್ ಗಳಲ್ಲಿ ಸೆಲ್ಫಿ ಕ್ಯಾಮೆರಾದಲ್ಲಿ ೪ಕೆ ವಿಡಿಯೋ ಆಗದು. ಈ ಫೋನ್ ಅಲ್ಲಿದೆ.
  • ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್
  • ಆಪ್ಟಿಕಲ್ ಸ್ಟೆಬಿಲೈಜೇಶನ್ ಮುಖ್ಯ ಕ್ಯಾಮೆರಾ ಗೆ ಇದೆ.
  • ೬೦ಪಿ ವಿಡಿಯೋ ರೆಕಾರ್ಡಿಂಗ್ ಫುಲ್ ಎಚ್ಡಿ ಅಲ್ಲಿ ಆಗುತ್ತೆ.
  • ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋಗ್ರಾಫಿ.

ಕೊರತೆಗಳು

  • ಟೆಲಿಫೋಟೋ ಕ್ಯಾಮೆರಾ ಇಲ್ಲ.
  • ೬೦ಪಿ ವಿಡಿಯೋ ರೆಕಾರ್ಡಿಂಗ್ ೪ಕೆ ಅಲ್ಲಿ ಆಗದು.
  • ೮ಕೆ ವಿಡಿಯೋ ರೆಕಾರ್ಡಿಂಗ್ ಸಾಧ್ಯ ಇಲ್ಲ.
  • ಜಾರ್ಜರ್ ಫೋನ್ ಜೊತೆ ಬರಲ್ಲ. ಅದನ್ನು ಮತ್ತು ಖರೀದಿಸಬೇಕು.
  • ನೀವು 888 ಅಥವಾ ಸ್ನ್ಯಾಪ್ ಡ್ರಾಗನ್ 8 ಫರ್ಸ್ಟ್ ಜೆನ್ ಅಂತಹ ಫ್ಲ್ಯಾಗ್ ಶಿಪ್ ಪ್ರಾಸೆಸರ್ ಬಯಸಿದ್ದರೆ ಇದರಲ್ಲಿ ಇಲ್ಲ.
  • ೩.೫ ಆಡಿಯೋ ಜ್ಯಾಕ್ ಇಲ್ಲ.
  • ನಿಮಗೆ ಎರಡು ಸಿಮ್ ಹಾಗೂ ಮೈಕ್ರೋ ಎಸ್ ಡಿ ಒಟ್ಟಿಗೆ ಬಳಸಲಾಗದು.

ಕೊನೆಯ ಮಾತು

ಒಟ್ಟಿನಲ್ಲಿ ಸ್ಯಾಮ್ಸಂಗ್ ಅವರ ಗ್ಯಾಲಕ್ಸಿ ಎ73 5ಜಿ ಸ್ಮಾರ್ಟ್ ಫೋನ್ ಹಣಕ್ಕೆ ತಕ್ಕ ಮೌಲ್ಯ ನೀಡುವ ಪ್ರಿಮಿಯಂ ಶ್ರೇಣಿಯ ಫೋನ್ ಎನ್ನ ಬಹುದು. ನಿಮ್ಮ ಬಜೆಟ್ 45 ಸಾವಿರ ಇದ್ದರೆ ಈ ಫೋನ್ ಸೂಕ್ತ. ಆದರೆ ಚಾರ್ಜರ್ ಅಥವಾ ಇಯರ್ ಫೋನ್ ಅನ್ನು ಪ್ರತ್ಯೇಕವಾಗಿ ಖರೀದಿ ಮಾಡಬೇಕು. 

ನಿಮ್ಮ ಬಜೆಟ್ 25 ಸಾವಿರದ ವರೆಗೆ ಇದ್ದರೆ ನೀವು ಸ್ಯಾಮ್ ಸಂಗ್ ಎಂ52 ೫ಜಿ ಕಡೆ ಒಮ್ಮೆ ನೋಡಿ. ಅದರಲ್ಲಿ ಸ್ನ್ಯಾಪ್ ಡ್ರಾಗನ್ 778ಜಿ ಪ್ರಾಸೆಸರ್, ೧೨೦ಹರ್ಟ್ಜ್ ನ ಸೂಪರ್ ಅಮೋಲ್ಡ್ ತೆರೆ, 64ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ, 12ಎಂಪಿ 123 ಡಿಗ್ರೀ ವೈಡ್ ಕ್ಯಾಮೆರಾ, 5ಎಂಪಿ ಮ್ಯಾಕ್ರೋ ಕ್ಯಾಮೆರಾ ಹಿಂದೆ, 32ಮೆಗಾ ಪಿಕ್ಸೆಲ್ ಮುಂದೆ ಕ್ಯಾಮೆರಾ, 4ಕೆ ವಿಡಿಯೋ ರೆಕಾರ್ಡಿಂಗ್ ಹಿಂದಿನ ಕ್ಯಾಮೆರಾ ಮೂಲಕ ಎಲ್ಲ  ಇದೆ. ಅದರಲ್ಲಿ 3.5 ಆಡಿಯೋ ಜ್ಯಾಕ್ ಕೂಡಾ ಇಲ್ಲ.

ಗ್ಯಾಲಕ್ಸಿ ಎ ಸಿರೀಸ್ ನ ಎಲ್ಲ ಫೋನ್ ಅನ್ನು ಅಮೇಜಾನ್ ಅಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬಜೆಟ್ 40 ಸಾವಿರದ ಹತ್ತಿರ ಇದ್ದರೆ ಒನ್ ಪ್ಲಸ್ 9ಆರ್ ಟಿ 5ಜಿ ಕೂಡಾ ಒಮ್ಮೆ ನೋಡಿ. 30ಸಾವಿರ ಕ್ಕೆ ಒನ್ ಪ್ಲಸ್ ನೊರ್ಡ್ 2 5ಜಿ ಇದೆ. ನಿಮಗೆ ಕಾಸಿಗೆ ತಕ್ಕ ಕಜ್ಜಾಯ ಸಿಗುವದಂತೂ ಗ್ಯಾರಂಟಿ. 

ಇನ್ನು ಒನ್ ಪ್ಲಸ್ 9 ಪ್ರೋ 5ಜಿ  ಫ್ಲ್ಯಾಗ್ ಶಿಪ್ ಫೋನ್ ಸಹ ಇದೆ. ಇದೇ ಮಾರ್ಚ್ ಅಲ್ಲಿ ಒನ್ ಪ್ಲಸ್ 10 ಪ್ರೋ 5ಜಿ ಕೂಡಾ ಮಾರುಕಟ್ಟೆಗೆ ಬರಲಿದೆ. ಆಗ ಒನ್ ಪ್ಲಸ್ 9 ಪ್ರೋ 5ಜಿ ಬೆಲೆ ಕೂಡಾ ಕಡಿಮೆ ಆದರೂ ಆಶ್ಚರ್ಯ ಇಲ್ಲ.

ಅಕಸ್ಮಾತ್ ನಿಮಗೆ 5ಜಿ ಬೇಡ ಎಂದರೆ 4ಜಿ ಇರೋ ಫೋನ್ ಅನ್ನು ಕಡಿಮೆ ಬೆಲೆಗೆ ಸಹ ಖರೀದಿಸಬಹುದು. ಯಾಕೆಂದರೂ ಇನ್ನೂ ಭಾರತದಕ್ಕೆ ೫ಜಿ ಬಂದಿಲ್ಲ. ಅವುಗಳ ಬೆಲೆಯೂ ಜಾಸ್ತಿ. ಹಾಗೂ ಡ್ಯುಯಲ್ ಬ್ಯಾಂಡ್ ವೈಫೈ ಇರುವ ಫೋನ್ ಖರೀದಿಸಿದರೆ ವೈಫೈ ಅಲ್ಲೇ ಜಾಸ್ತಿ ವೇಗದ ಇಂಟರ್ನೆಟ್ ಪಡೆದುಕೊಳ್ಳಬಹುದು. ಪೋಕೊ ಎಂ೪ ಪ್ರೋ ಇದರ ೪ಜಿ ವರ್ಶನ್ ಕೂಡಾ ಮಾರುಕಟ್ಟೆಗೆ ಬರಲಿದೆ. ಅದು ಅಮೋಲ್ಡ್ ತೆರೆ ಹೊಂದಿರಲಿದೆ.

ನೀವು ಗ್ಯಾಲಕ್ಸಿ ಎ73 5ಜಿ ಫೋನ್ ಬಳಸಿದ್ದೀರಾ? ನಿಮ್ಮ ಅನಿಸಿಕೆ ಏನು?

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ