ನಿನ್ನೆ ಮಾರ್ಚ್ 8 ರಂದು ಎಪಲ್ ನ 2022ರ ಮೊಟ್ಟ ಮೊದಲ ಕಾರ್ಯಕ್ರಮ ನಡೆಯಿತು. ಅದರಲ್ಲಿ ಎಪಲ್ ನ ಬರಲಿರುವ ಹೊಸ ಪ್ರಾಡಕ್ಟ್ ಗಳ ಘೋಷಣೆ ಮಾಡಲಾಯ್ತು. ಇದರಲ್ಲಿ ಕಡಿಮೆ ಬೆಲೆಯ ಐಫೋನ್, ಹೊಸ ಡೆಸ್ಕ್ ಟಾಪ್ ಹಾಗೂ ಮಾನಿಟರ್ ಸೇರಿದೆ.
ಬನ್ನಿ ಅದರ ವಿವರ ನೋಡೋಣ.
ಎಪಲ್ ಟಿವಿ+
ಎಪಲ್ ಟಿವಿ+ ಎಪಲ್ ನ ಒರಿಜಿನಲ್ ಧಾರಾವಾಹಿ, ಸಿನಿಮಾ ಗಳನ್ನು ಪ್ರಸಾರ ಮಾಡುತ್ತದೆ. ಅದೇ ರೀತಿ ಶುಕ್ರವಾರ ರಾತ್ರಿ ಬೇಸ್ ಬಾಲ್ ಆಟವನ್ನೂ ಸಹ ಪ್ರಸಾರ ಮಾಡಲಿದೆ. ಇದನ್ನು ಐಪ್ಯಾಡ್, ಐಫೋನ್, ಮ್ಯಾಕ್ ಹೀಗೆ ಎಲ್ಲೆಲ್ಲಿ ಎಪಲ್ ಟಿವಿ+ ಇದೆಯೋ ಅಲ್ಲಿ ನೋಡಬಹುದು.
ಐಫೋನ್ 13
ಐಫೋನ್ ಎಸ್ ಇ 5ಜಿ ಎ15 ಬಯೋನಿಕ್ ಚಿಪ್ ಜೊತೆ
ಆದರೆ ಈ ಫೋನ್ ಐಫೋನ್ 13ರಲ್ಲಿ ಇರುವ ಎಪಲ್ ನ ಎ15 ಬಯೋನಿಕ್ ಚಿಪ್ ಅನ್ನೇ ಹೊಂದಿರಲಿದೆ. ಅಂದರೆ ಫೋನ್ ನ ವೇಗ ಹಾಗೂ ಸಾಮರ್ಥ್ಯ ಐಫೋನ್ ಹಾಗೆಯೆ ಇದ್ದು ಬೇರೆ ವಿಭಾಗಗಳಲ್ಲಿ ಬೆಲೆ ಕಡಿತ ಗೊಳಿಸಲಾಗಿದೆ.
ಎಪಲ್ ಎ15 ಬಯೋನಿಕ್ ಚಿಪ್ 6 ಕೋರ್ ನ ಸಿಪಿಯು ಹಾಗೂ 4 ಕೋರ್ ಜಿಪಿಯು ಹೊಂದಿದೆ. ಮಶೀಲ್ ಲರ್ನಿಂಗ್ (ಯಂತ್ರ ಕಲಿಕೆ) ಗೆ ಸಹಾಯ ಆಗುವ 16 ಕೋರ್ ನ್ಯೂರಲ್ ಎಂಜಿನ್ ಸಹ ಈ ಚಿಪ್ ಅಲ್ಲಿ ಇದೆ.
ಪರದೆ 4.7 ಇಂಚಿನ ರೆಟಿನಾ ಎಚ್ ಡಿ ಆಗಿದೆ. ಪರದೆ ಹಾಗೂ ಬಾಡಿ ಸುರಕ್ಷತೆಗಾಗಿ ಗ್ಲಾಸ್ ಪದರ ಇರಲಿದ್ದು ಐಪಿ67 ಮಾನಕ್ಕೆ ಅನುಗುಣವಾಗಿ ನೀರಿನಿಂದ ಫೋನ್ ರಕ್ಷಿಸುವ ಶಕ್ತಿ ಇದೆ.
ಪರದೆಯ ಕೆಳಗೆ ಗೋಲಾಕಾರದ ಫಿಂಗರ್ ಫ್ರಿಂಟ್ ಸ್ಕ್ಯಾನಿಂಗ್ ಸಾಮರ್ಥ್ಯ ಇರುವ ಹೋಂ ಬಟನ್ ಇದೆ. ಅದನ್ನು ಅನ್ ಲಾಕ್ ಮಾಡಲು, ಅಪ್ಲಿಕೇಶನ್ ಗಳ ಸುರಕ್ಷತೆಗೆ ಬಳಸಬಹುದು.
ಈ ಫೋನ್ ಕಪ್ಪು, ಬಿಳಿ ಹಾಗೂ ಕೆಂಪು ಬಣ್ಣದಲ್ಲಿ ಲಭ್ಯವಿರಲಿದೆ.
ಹಿಂಬಾಗದಲ್ಲಿ 12 ಮೆಗಾ ಪಿಕ್ಸೆಲ್ ಕ್ಯಾಮರಾ ಇದ್ದು ಫೋಟೊಗ್ರಾಫಿ ಹಾಗೂ ವಿಡಿಯೋ ತೆಗೆಯಲು ಸಹಾಯಕ. ಈ ಫೋನ್ ಐಒ ಎಸ್ 15 ಆಪರೇಟಿಂಗ್ ಸಿಸ್ಟೆಮ್ ಹೊಂದಿದ್ದು ಅದರ ಹೆಚ್ಚಿನ ಫೀಚರ್ ಲಭ್ಯ ಇದೆ.
ಇದರ ಬೆಲೆ ಅಮೇರಿಕದಲ್ಲಿ 429 ಡಾಲರ್ ಆರಂಭ ಆಗಲಿದೆ.
ಭಾರತದಲ್ಲಿ 64ಜಿಬಿ - 43900ರೂ, 128ಜಿಬಿ - 48900 ರೂ, 256ಜಿಬಿ - 58900ರೂ ಇರಲಿದೆ. ಬಹುಶಃ ಇವು ಎಪಲ್ ಫೋನ್ ಸರಣಿಯಲ್ಲಿ ಕಡಿಮೆ ಬೆಲೆಯ ಫೋನ್ ಅನ್ನ ಬಹುದು.
ಐಪ್ಯಾಡ್ ಏರ್ ಎಪಲ್ ನ ಎಂ1 ಚಿಪ್ ನೊಂದಿಗೆ
ಹೊಸ 10.9 ಇಂಚಿನ ಐಪ್ಯಾಡ್ ಏರ್ ಎಂ೧ ಚಿಪ್ ಬಳಸಿ ಬಿಡುಗಡೆ ಮಾಡಿದೆ. ಈ ಮೊದಲು ಈ ಚಿಪ್ ಮ್ಯಾಕ್ ಬುಕ್ ಅಲ್ಲಿ ಬಳಸಲಾಗಿತ್ತು.
ಪಿ೩ ಬಣ್ಣದ ಸಾಮರ್ಥ್ಯ ೫೦೦ ನಿಟ್ಸ್ ಬ್ರೈಟ್ನೆಸ್ ಇರುವ ರೆಟಿನಾ ಪರದೆ ಕೂಡಾ ಇದೆ. 12 ಮೆಗಾ ಪಿಕ್ಸೆಲ್ ನ ಅಲ್ಟ್ರಾ ವೈಡ್ ಫ್ರಂಟ್ ಕ್ಯಾಮೆರಾ ಕೂಡಾ ಇದೆ.
ಬೂದಿ, ಬಿಳಿ, ತಿಳಿ ಗುಲಾಬಿ, ತಿಳಿ ನೇರಳೆ ಹಾಗೂ ತಿಳಿ ನೀಲಿ ಬಣ್ಣಗಳಲ್ಲಿ ಐಪ್ಯಾಡ್ ಏರ್ ಲಭ್ಯವಿರಲಿದೆ.
ಈ ಐಪ್ಯಾಡ್ 599 ಡಾಲರ್ ಅಮೇರಿಕದಲ್ಲಿ ಲಭ್ಯವಿರಲಿದೆ. ಭಾರತದಲ್ಲಿ 54900 ರಿಂದ 82900 ರೂ ವರೆಗೆ ಇರಲಿದೆ.
ಎಂ1 ಅಲ್ಟ್ರಾ ಚಿಪ್
ಇದುವರೆಗೆ ಎಂ1 ಪ್ರಾಸೆಸರ್ ಶ್ರೇಣಿಯಲ್ಲಿ ಎಂ1 / ಎಂ1 ಪ್ರೋ / ಎಂ1 ಮ್ಯಾಕ್ಸ್ ಚಿಪ್ ಗಳು ಇದ್ದವು. ಡೆಸ್ಕ್ ಟಾಪ್ ಬಳಕೆಗಾಗಿ ಎಪಲ್ ಎರಡು ಎಂ1 ಮ್ಯಾಕ್ಸ್ ಚಿಪ್ ಗಳ ಸಿಲಿಕಾನ್ ಡೈ ಅನ್ನು ಅಲ್ಟ್ರಾ ಫ್ಯೂಶನ್ ಎಂಬ ತಂತ್ರಜ್ಞಾನ ಬಳಸಿ ಜೋಡಿಸಿದೆ.
ಈ ಅಲ್ಟ್ರಾ ಫ್ಯೂಶನ್ 2.5ಟೆರ್ರಾ ಬೈಟ್/ಸೆಕೆಂಡ್ ವರೆಗೆ ಮಾಹಿತಿಯನ್ನು ಈ ಎರಡು ಮ್ಯಾಕ್ಸ್ ಚಿಪ್ ನಡುವೆ ಸಾಗಿಸಲು ಅನುಕೂಲ ಮಾಡಿಕೊಡುತ್ತದೆ.
ಈ ಚಿಪ್ ಅತಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು ಅದೇ ಸಮಯದಲ್ಲಿ ಕಡಿಮೆ ವಿದ್ಯುತ್ ಬಳಸುತ್ತದೆ.
ಮ್ಯಾಕ್ ಸ್ಟುಡಿಯೋ ಡೆಸ್ಕ್ ಟಾಪ್ ಬಾಕ್ಸ್
ಡೆಸ್ಕ್ ಟಾಪ್ ಮ್ಯಾಕ್ ಸ್ಟುಡಿಯೋ ಅನ್ನು ಬಿಡುಗಡೆ ಮಾಡಿದೆ. ಈ ಬಾಕ್ಸ್ ಅಲ್ಲಿ ೪ ಥಂಡರ್ ಬೋಲ್ಟ್ ಪೋರ್ಟ್, 10ಜಿಬಿ ಈಥರ್ ನೆಟ್ ಪೋರ್ಟ್, ಎರಡು ಯುಎಸ್ ಬಿ ಎ ಪೋರ್ಟ್, ಒಂದು ಎಚ್ ಡಿ ಎಂ ಐ, 3.5 ಆಡಿಯೋ ಜ್ಯಾಕ್ ಕನೆಕ್ಟಿವಿಟಿ ಅನ್ನು ಹೊಂದಿದೆ.
ವೈಫೈ 6 ಮತ್ತು ಬ್ಲ್ಯೂಟೂತ್ 5 ಸಹ ಹೊಂದಿದೆ. ಒಂದು ಎಸ್ ಡಿ ಕಾರ್ಡ್ ರೀಡರ್ ಇದೆ.
ಈ ಮ್ಯಾಕ್ ಸ್ಟುಡಿಯೋ ಎರಡು ಬಗೆಯಲ್ಲಿ ಬರಲಿದೆ. ಒಂದು ಎಂ೧ ಮ್ಯಾಕ್ಸ್ ಚಿಪ್ ಹಾಗೂ ಇನ್ನೊಂದು ಹೊಸ ಎಂ೧ ಅಲ್ಟ್ರಾ ಚಿಪ್ ನೊಂದಿಗೆ.
ಮ್ಯಾಕ್ ಸ್ಟುಡಿಯೋ ಡಿಸ್ಪ್ಲೇ
ಮ್ಯಾಕ್ ಸ್ಟುಡಿಯೋ ಡಿಸ್ಪ್ಲೇ ಎಂಬ 27 ಇಂಚಿನ ಮಾನಿಟರ್ ಸಹ ಬಿಡುಗಡೆ ಮಾಡಿದೆ. ಇದನ್ನು ಲ್ಯಾಂಡ್ ಸ್ಕೇಪ್ ಹಾಗೂ ಪೋರ್ಟ್ರೇಟ್ ಮೋಡ್ ಅಲ್ಲಿ ಬಳಸಬಹುದು. ಡಿಸಿಐ ಪಿ ೩ ಬಣ್ಣ 600 ನಿಟ್ಸ್ ಬ್ರೈಟ್ನೆಸ್ ಅಲ್ಲಿ ತೋರಿಸುವ ಸಾಮರ್ಥ್ಯ ಹೊಂದಿದೆ.
ಈ ಮಾನಿಟರ್ ಅಲ್ಲಿ ಎ13 ಬಯೋನಿಕ್ ಪ್ರಾಸೆಸರ್ ಸಹ ಇದ್ದು 12 ಮೆಗಾಪಿಕ್ಸೆಲ್ ವೈಡ್ ಎಂಗಲ್ ಕ್ಯಾಮೆರಾ ಇದೆ. ಸ್ಪೀಕರ್ ಹಾಗೂ ಮೈಕ್ ಕೂಡಾ ಇದೆ. ಡಾಲ್ಬಿ ಆಟ್ಮೋಸ್ ಆಡಿಯೋ ತಂತ್ರಜ್ಞಾನ ಇದೆ.
ಇಲ್ಲಿ ಸಾಧಾರಣ ಗ್ಲಾಸ್ ಹಾಗೂ ನ್ಯಾನೋ ಟೆಕ್ಸ್ಚರ್ ಗ್ಲಾಸ್ ಆಯ್ಕೆ ಇದೆ. ಸ್ಟ್ಯಾಂಡ್ ಅಲ್ಲಿ ಮೂರು ಬಗೆಗಳಿವೆ. ನೀವು ಆರಿಸಿಕೊಳ್ಳುವ ಆಯ್ಕೆಯ ಮೇಲೆ ಬೆಲೆ ನಿರ್ಧಾರ ಆಗುತ್ತದೆ. ಈ ಮಾನಿಟರ್ ಜೊತೆಗೆ ಮೇಲಿನ ಮ್ಯಾಕ್ ಸ್ಟುಡಿಯೋ ಡೆಸ್ಕ್ ಟಾಪ್ ಬಾಕ್ಸ್ ಬಳಸಬೇಕು.
ಮ್ಯಾಕ್ ಸ್ಟುಡಿಯೋ ಡಿಸ್ಪ್ಲೇ ಮಾನಿಟರ್ - 1.6 ಲಕ್ಷ ರೂ ರಿಂದ 2.3 ಲಕ್ಷದ ವರೆಗೆ
ಯಾವುದೇ ವಸ್ತು ಖರೀದಿಸ ಬಯಸಿದ್ದರೆ ಎಪಲ್ ತಾಣದಲ್ಲಿ ಆರ್ಡರ್ ನೀಡಬಹುದು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.