ತಂತ್ರಜ್ಞಾನ ಲೋಕವೇ ಹೀಗೆ. ಅಲ್ಲಿ ಬದಲಾವಣೆ ಎಂಬುದು ನಿರಂತರ. ಸ್ಪರ್ಧೆ ಕೂಡಾ ಜಾಸ್ತಿ. ಅಂತರ್ಜಾಲದ ರೂಪು ರೇಷೆಯನ್ನು ಬದಲಿಸಿದ್ದು ಗೂಗಲ್ ಎಂಬುದಕ್ಕೆ ಎರಡು ಮಾತಿಲ್ಲ.
ಇಡೀ ಅಂತರ್ಜಾಲದ ನೂರಾರು ಕೋಟಿ ತಾಣ, ಬ್ಲಾಗ್ ಎಲ್ಲ ಇಂಡೆಕ್ಸ್ ಮಾಡಿ ಹುಡುಕಾಟ ಸುಲಭ ಗೊಳಿಸಿದ್ದು ಗೂಗಲ್. ಹಾಗೆ ನೋಡಿದರೆ ಗೂಗಲ್ ಗಿಂತ ಮುಂಚೆ ಹಲವು ಸರ್ಚ್ ಇಂಜಿನ್ ಇದ್ದವು. ಆದರೆ ಅದರ ಹೊಸ ಪರಿಕಲ್ಪನೆ ಅದನ್ನು ವಿಶ್ವ ವಿಖ್ಯಾತ ಮಾಡಿತು.
ಗೂಗಲ್ ನಂತರ ಮ್ಯಾಪ್, ಟ್ರಾನ್ಸ್ಲೇಟ್, ನ್ಯೂಸ್, ಅಂಡ್ರಾಯಿಡ್, ಡೊಕ್ಸ್ ಹೀಗೆ ಹಲವು ಸೇವೆ ಆರಂಭಿಸಿತು.
2020ರಲ್ಲಿ ಕ್ಲೌಡ್ ಫ್ಲೇರ್ ಟ್ರಾಫಿಕ್ ವಿಶ್ಲೇಷಣೆ ಪ್ರಕಾರ ಗೂಗಲ್.ಕಾಂ (ಸರ್ಚ್, ಮ್ಯಾಪ್, ಟ್ರಾನ್ಸ್ಲೇಟ್, ನ್ಯೂಸ್ ಹೀಗೆ ಎಲ್ಲ ಸೇವೆ ಸೇರಿ) ನಂ. 1 ತಾಣ ಆಗಿತ್ತು.
ಆದರೆ ಕ್ಲೌಡ್ ಫ್ಲೇರ್ ಪ್ರಕಾರ 2021ರ ಪಟ್ಟಿ ಪ್ರಕಾರ ಈಗ ಟಾಪ್ ವೆಬ್ ಸೈಟ್ ಬೇರೆ ಆಗಿದೆ. ಯಾವುದು ಅದು?
೨೦೨೧ರ ಟಾಪ್ ವೆಬ್ ಸೈಟ್ ಯಾವುದು?
ಕ್ಲೌಡ್ ಫ್ಲೇರ್ ಎಂಬ ತಾಣ ಟಾಪ್ ವೆಬ್ ಸೈಟ್ ಪಟ್ಟಿ ಅನ್ನು ತಾಣಕ್ಕೆ ಬರುತ್ತಿರುವ ಇಂಟರ್ನೆಟ್ ಟ್ರಾಫಿಕ್ ಆಧಾರದ ಮೇಲೆ ಪ್ರಕಟಿಸುತ್ತಿದೆ. 2020ರಲ್ಲಿ ಗೂಗಲ್.ಕಾಂ ನಂ 1. ಹಾಗೂ ಫೇಸ್ ಬುಕ್ ನಂ. 2 ಆಗಿತ್ತು.
2021ರಲ್ಲಿ ನಿಧಾನವಾಗಿ ಆ ನಂ. ಸ್ಥಾನವನ್ನು ಟಿಕ್ ಟಾಕ್.ಕಾಂ ಮೇಲಕ್ಕೇರುತ್ತಾ ಬಂದು 2021ರ ಕೊನೆಯಲ್ಲಿ ಎಲ್ಲಾ ತಾಣಗಳನ್ನು ಹಿಂದಿಕ್ಕಿ ನಂ 1 ಸ್ಥಾನ ಪಡೆದು ಕೊಂಡಿದೆ.
2020ರಲ್ಲಿ ಟಿಕ್ ಟಾಕ್ ೭ನೇ ಸ್ಥಾನದಲ್ಲಿತ್ತು.
2021ರಲ್ಲಿ ಟಿಕ್ ಟಾಕ್.ಕಾಂ ಟ್ರಾಫಿಕ್ ಪ್ರಕಾರ ನಂ. 1 ವೆಬ್ ತಾಣ ಆಗಿತ್ತು.
ಈ ಎಪ್ ಅನ್ನು 2019ರ ಜೂನ್ ರಲ್ಲೇ ಭಾರತದಲ್ಲಿ ಬೇರೆ ಉಳಿದ ಹಲವು ಚೈನೀಸ್ ಎಪ್ ಜೊತೆ ಬ್ಯಾನ್ ಮಾಡಲಾಗಿದೆ. ಆದರೆ ಜಗತ್ತಿನ ಬೇರೆಡೆ ಅದರ ಜನಪ್ರಿಯತೆ ನಾಗಾಲೋಟದಿಂದ ಏರುತ್ತಿದೆ.
೨೦೨೧ರ ಟಾಪ್ ಟೆನ್ ವೆಬ್ ಸೈಟ್ ಪಟ್ಟಿ
ಕ್ಲೌಡ್ ಫ್ಲೇರ್ ತಾಣದ ಸೆಪ್ಟಂಬರ್ ನಿಂದ ಡಿಸೆಂಬರ್ ತಿಂಗಳ ಟ್ರಾಫಿಕ್ ಟ್ರೆಂಡ್ ಪ್ರಕಾರ 2021ರ ಟಾಪ್ ಟೆನ್ ವೆಬ್ ಸೈಟ್ ಪಟ್ಟಿ ಕೆಳಗಿವೆ. ಯಾಕೆ ಸೆಪ್ಟೆಂಬರ್? ಕ್ಲೌಡ್ ಫ್ಲೇರ್ ಸೇವೆ ಆರಂಭವಾಗಿದ್ದೇ ಸೆಪ್ಟೆಂಬರ್ 2020ರ ಸುಮಾರಿಗೆ.
- ಟಿಕ್ ಟಾಕ್.ಕಾಂ
- ಗೂಗಲ್.ಕಾಂ
- ಫೇಸ್ ಬುಕ್.ಕಾಂ
- ಮೈಕ್ರೊಸಾಫ್ಟ್.ಕಾಂ
- ಎಪಲ್.ಕಾಂ
- ಅಮೇಜಾನ್.ಕಾಂ
- ನೆಟ್ ಫ್ಲಿಕ್ಸ್.ಕಾಂ
- ಯೂಟ್ಯೂಬ್.ಕಾಂ
- ಟ್ವಿಟ್ಟರ್.ಕಾಂ
- ವಾಟ್ಸ್ ಎಪ್.ಕಾಂ
ಕೊನೆಯ ಮಾತು
ಈಗಿನ ಟ್ರೆಂಡ್ ಬಗ್ಗೆ ತಿಳಿಯಲು ಈ ಟಾಪ್ ವೆಬ್ ಸೈಟ್ ಪಟ್ಟಿ ಸಹಾಯಕಾರಿ. ಇತ್ತೀಚೆಗೆ ಫೇಸ್ ಬುಕ್ ಕೂಡಾ ಎಕ್ಟಿವ್ ಬಳಕೆದಾರರ ಸಂಖ್ಯೆ ಚೂರು ಕಡಿಮೆ ಆದ ಬಗ್ಗೆ ತನ್ನ ಹೂಡಿಕೆದಾರರಿಗೆ ತಿಳಿಸಿದೆ.
ಟಿಕ್ ಟಾಕ್ ವಿಡಿಯೋ ಸೇವೆ ಎಲ್ಲ ಕಡೆ ಕ್ರೇಜ್ ಹಬ್ಬಿಸಿದೆ ಎಂದರೆ ಅತಿಶಯೋಕ್ತಿ ಅಲ್ಲ. ಆದರೆ ೨೦೨೨ರಲ್ಲಿ ನಂ ೧ ತಾಣ ಯಾವುದಾಗಲಿದೆ ಎಂಬ ಕುತೂಹಲ ಇದ್ದೇ ಇದೆ. ಕಾದು ನೋಡೋಣ.
ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.