ಇಂದು ಪ್ರತಿ ಕಂಪ್ಯೂಟರ್ ಇಂಜಿನಿಯರ್ ಗೆ ಉದ್ಯಮ ಶೀಲತೆ ತುಂಬಾ ಮುಖ್ಯ. ಕೇವಲ ತಂತ್ರಜ್ಞಾನ ಕಲಿತು ಅದರಲ್ಲೇ ಸಾಧಿಸುತ್ತೇನೆಂದು ಹೊರಟರೆ ಅದುವೇ ನಿಮ್ಮ ಮಿತಿ ಆಗಿ ಬಿಡಬಹುದು. ಜೊತೆಗೆ ವ್ಯಾಪಾರಿ ಚಾಣಾಕ್ಷತೆಯನ್ನೂ ಸಹ ಸ್ವಲ್ಪ ರೂಢಿಸಿಕೊಳ್ಳುವದು ಉತ್ತಮ.
ಹೀಗೆ ವ್ಯಾಪಾರಿ ಜಾಣತನದ ಬಗ್ಗೆ ಪರಿಚಯ ಪಡೆಯಲು ಹಲವು ರೀತಿ ಇದೆ. ಒಂದು ನಾವೇ ತಪ್ಪು ಮಾಡಿ ಕಲಿಯುವದು. ಇನ್ನೊಂದು ಇನ್ನೊಬ್ಬರ ಅನುಭವದ ಮಾತುಗಳ ಮೂಲಕ.
ಇತ್ತೀಚೆಗೆ ಪ್ರಸಾರ ಆದ ರಿಯಾಲಿಟಿ ಶೋ ಒಂದು ನಿಮಗೆ ಇಂತಹ ಅನುಭವದ ಮಾತುಗಳನ್ನು ಕೇಳಲು, ನೂರಾರು ಸ್ಟಾರ್ಟ್ ಅಪ್ ಐಡಿಯಾ ನೋಡಲು ಅನುವು ಮಾಡಿಕೊಡುತ್ತದೆ. ಆ ರಿಯಾಲಿಟಿ ಶೋ ಹೆಸರೇ ಶಾರ್ಕ್ ಟ್ಯಾಂಕ್ ಇಂಡಿಯಾ.
ಕೆಲಸಕ್ಕೆ ಬಾರದ ಕೇವಲ ಬಯ್ಗುಳ, ಕಚ್ಚಾಟ ತೋರಿಸುವ ಹಲವು ರಿಯಾಲಿಟಿ ಶೋ ಇವೆ. ಆದರೆ ಕೌ ಬನೇಗಾ ಕರೋಡ್ ಪತಿ ಬಿಟ್ಟರೆ ಜ್ಞಾನ ಹೆಚ್ಚಿಸುವ ಒಂದಿಷ್ಟು ಕಲಿಯಲು, ತಿಳಿಯಲು ಅವಕಾಶ ಮಾಡಿ ಕೊಡುವ ರಿಯಾಲಿಟಿ ಶೋ ಅಂದರೆ ಶಾರ್ಕ್ ಟ್ಯಾಂಕ್ ಇಂಡಿಯಾ ಎಂದು ಹೇಳಬಹುದು.
{tocify} $title={ವಿಷಯ ಸೂಚಿ}
ಶಾರ್ಕ್ ಟ್ಯಾಂಕ್ ಇಂಡಿಯಾ ಅಲ್ಲಿ ಏನಿರುತ್ತೆ?
ಶಾರ್ಕ್ ಟ್ಯಾಂಕ್ ಇಂಡಿಯಾ |
ಈ ರಿಯಾಲಿಟಿ ಶೋದಲ್ಲಿ ಒಂದು ಉದ್ಯಮದಲ್ಲಿ ಬಂಡವಾಳ ಹೂಡುವ ಇನ್ವೆಸ್ಟರ್ ಗಳು ತೀರ್ಪುಗಾರರ ರೀತಿ ಕೂತಿರುತ್ತಾರೆ. ಅವರನ್ನು ಶಾರ್ಕ್ ಎಂದು ಕರೆಯಲಾಗುತ್ತದೆ.
ಸ್ಟಾರ್ಟ್ ಅಪ್ ನಡೆಸುತ್ತಿರುವ ಚಿಕ್ಕ ಉದ್ಯಮಿಗಳು ಬಂದು ತಮ್ಮ ವ್ಯಾಪಾರಿ ಐಡಿಯಾ, ಬ್ರ್ಯಾಂಡ್ ಇತ್ಯಾದಿಗಳ ಬಗ್ಗೆ ಪ್ರಸಂಟೇಶನ್ ಮಾಡುತ್ತಾರೆ.
ಕುಳಿತಿರುವ ಶಾರ್ಕ್ ಗಳು ಅಂದರೆ ಪ್ರಖ್ಯಾತ ಉದ್ಯಮಿಗಳು ಆ ವ್ಯಾಪಾರಿ ಮಾಡೆಲ್ ಅಲ್ಲಿರುವ ದೋಷಗಳು, ಕೊರತೆ, ವ್ಯಾಲ್ಯೂವೇಶನ್ ಬಗ್ಗೆ ಪ್ರಾಮಾಣಿಕ ಕೆಲವೊಮ್ಮೆ ಕಠೋರ ಅನಿಸಿಕೆಯನ್ನು ಬಿಚ್ಚಿಡುತ್ತಾರೆ. ಸಲಹೆಗಳನ್ನೂ ನೀಡುತ್ತಾರೆ.
ಬ್ಯುಸಿನೆಸ್ ಇಷ್ಟ ಆದರೆ ಬಂಡವಾಳ ಹೂಡುತ್ತಾರೆ ಕೂಡಾ!
ಕಂಪ್ಯೂಟರ್ ಇಂಜಿನಿಯರ್ ಗೆ ಹೇಗೆ ಉಪಯುಕ್ತ?
ಈ ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋ ಒಬ್ಬ ಕಂಪ್ಯೂಟರ್ ಇಂಜಿನಿಯರ್ ಗೆ ಹಲವು ರೀತಿಯಲ್ಲಿ ಉಪಯುಕ್ತ. ಹೇಗೆ ಬನ್ನಿ ನೋಡೋಣ. ಇಂಜಿನಿಯರಿಂಗ್ ಕಲಿತು ಮುಗಿದ ಮೇಲೆ ವಿದ್ಯಾರ್ಥಿಗೆ ಹಲವು ಆಯ್ಕೆಗಳಿರುತ್ತೆ.
- ಇನ್ನೂ ಮಾಸ್ಟರ್ ಡಿಗ್ರಿಯಂತಹ ಉನ್ನತ ಶಿಕ್ಷಣ ಮಾಡುವದು.
- ಯಾವುದಾದರೂ ಕಂಪನಿ ಸೇರಿ ಕೆಲಸ ಮಾಡುವದು.
- ಸ್ನೇಹಿತರ ಜೊತೆ ಸೇರಿ ತನ್ನದೇ ಸ್ಟಾರ್ಟ್ ಅಪ್ ಆರಂಭಿಸುವದು.
- ಫ್ರೀಲಾನ್ಸಿಂಗ್ ಕೆಲಸ ಮಾಡುವದು.
ಸ್ಟಾರ್ಟ್ ಅಪ್ ಅನ್ನುವದು ಕಷ್ಟಕರ ಕೆಲಸ ಆದರೂ ಇದರಲ್ಲಿ ಯಶಸ್ವಿ ಆದರೆ ಜೇಬು ತುಂಬಾ ಹಣವೋ ಹಣ! ಸ್ಟಾರ್ಟ್ ಅಪ್ ಯಶಸ್ಸಾದರೆ ನೀವೆ ನಿಮ್ಮ ಕಂಪನಿಯಲ್ಲಿ ಹಲವರಿಗೆ ಉದ್ಯೋಗ ನೀಡಬಹುದು.
ಆದರೆ ಸ್ಟಾರ್ಟ್ ಅಪ್ ಯಶಸ್ಸು ಮಾಡುವ ಕೆಲಸ ಇದೆಯಲ್ಲ. ಇದು ಸುಲಭದ ಕೆಲಸ ಅಲ್ಲ. ಒಂದು ಸರ್ವೇ ಪ್ರಕಾರ 90% ಸ್ಟಾರ್ಟ್ ಅಪ್ ಗಳು ಫೇಲ್ ಆಗುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಮುಖ್ಯ ಕಾರಣ ಮಾರುಕಟ್ಟೆಯ ನ್ನು ನಿಜವಾದ ಗ್ರಾಹಕರ ಅಗತ್ಯವನ್ನು ಅರಿಯದಿರುವದು ಹಾಗೂ ವ್ಯಾಪಾರಿ ಜಾಣತನದ ಕೊರತೆ.
ಆದರೆ ಉತ್ತಮ ವ್ಯಾಪಾರಿ ಐಡಿಯಾ, ಸರಿಯಾದ ಮಾರ್ಗದರ್ಶನ, ಸ್ಟ್ರೆಟಜಿ, ಪ್ರಾಮಾಣಿಕ ಪರಿಶ್ರಮ ಹಾಗೂ ಸರಿಯಾಗಿ ಕಾರ್ಯಗತ ಗೊಳಿಸಿದರೆ ನಿಮ್ಮ್ ಸ್ಟಾರ್ಟ್ ಅಪ್ ಯಶಸ್ಸಾಗಿ ಆ ೧೦% ಲಿಸ್ಟ ಅಲ್ಲಿರಬಹುದು.
ಒಂದು ಸ್ಟಾರ್ಟ್ ಅಪ್ ಯಶಸ್ಸಾಗಲು ಕೇವಲ ತಂತ್ರಜ್ಞಾನ ದ ಅರಿವು ಮಾತ್ರ ಅಲ್ಲ ಮಾರ್ಕೆಟಿಂಗ್, ಹೊಸ ಪರಿಕಲ್ಪನೆ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಸರಿಯಾದ ರೀತಿಯಲ್ಲಿ ಹಣ ವ್ಯರ್ಥ ಮಾಡದೇ ಕಾರ್ಯಗತ (ಎಕ್ಸೆಕ್ಯೂಶನ್) ಮಾಡುವದು ಎಲ್ಲ ಅತಿ ಮುಖ್ಯ.
ಅಷ್ಟೇ ಅಲ್ಲ ತನ್ನ ಐಡಿಯಾ ಅನ್ನು ಸಮರ್ಥವಾಗಿ ಬಂಡವಾಳ ಹೂಡಿಕೆ ಮಾಡುವವರ ಮುಂದೆ ವಿವರಿಸುವ ಅಗತ್ಯ ಕೂಡಾ ಇದೆ. ಬಂಡವಾಳ ಹೂಡಿಕೆ ಮಾಡುವವರಿಗೆ ನಿಮ್ಮ ಐಡಿಯಾದಲ್ಲಿ ದಮ್ ಇದೆ ಅನ್ನಿಸಿದರೆ ಮಾತ್ರ ತಮ್ಮ ಅಮೂಲ್ಯ ಹಣ, ಸಮಯ ನೀಡುತ್ತಾರೆ. ಇಲ್ಲದಿದ್ದರೆ ದೂರ ತಳ್ಳುತ್ತಾರೆ.
ಹೀಗೆ ಮಾಡಲು ಇಂಜಿನಿಯರ್ ಬಳಿ ಆ ಎಲ್ಲ ವಿಷಯದ ಬಗ್ಗೆ ಅರಿವು ಅಗತ್ಯ.
ಈ ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋ ನೋಡುವದರಿಂದ ಒಂದು ಪ್ರಸಂಟೇಶನ್ ಕೌಶಲ್ಯತೆಯ ಬಗ್ಗೆ ಐಡಿಯಾ ಬರುತ್ತೆ. ಅಷ್ಟೇ ಅಲ್ಲ ಉದ್ಯಮಿಗಳು ನೀಡುವ ಕಮೆಂಟ್ ಅಲ್ಲಿ ಅನುಭವದ ಮಾತುಗಳಿವೆ. ಇದು ಒಂದು ರೀತಿಯಲ್ಲಿ ಮನೋರಂಜನೆ ಕೊಡುವ ಜೊತೆಗೆ ಜ್ಞಾನವನ್ನೂ ಕೊಡುವ ಶೋ ಎನ್ನಬಹುದು.
ಶಾರ್ಕ್ ಟ್ಯಾಂಕ್ ಇಂಡಿಯಾ ಶೋ ಬಗ್ಗೆ
ಶಾರ್ಕ್ ಟ್ಯಾಂಕ್ ಎಂಬುದು ಮೂಲತಃ ಅಮೇರಿಕಾದ ವ್ಯಾಪಾರಿ ರಿಯಾಲಿಟಿ ಶೋ. 2009 ಇಸವಿಯಲ್ಲಿ ಆರಂಭ ಆಯ್ತು.
ಶಾರ್ಕ್ ಟ್ಯಾಂಕ್ ಇಂಡಿಯಾ ಎಂಬುದು ಹಿಂದಿ ರಿಯಾಲಿಟಿ ಶೋ ಆಗಿದ್ದು ಇದರ ಸೀಸನ್ 1 ಡಿಸೆಂಬರ್ ೨೦೨೧ - ಜನವರಿ ೨೦೨೨ ರ ಸಮಯದಲ್ಲಿ ಸೋನಿ ಟಿವಿಯಲ್ಲಿ ರಾತ್ರಿ 9 ರ ಪ್ರೈಮ್ ಟೈಮ್ ಅಲ್ಲಿ ಪ್ರಸಾರ ಆಯ್ತು. ಈ ಸೀಸನ್ ೧ ಅನ್ನು ಈಗ ಸೋನಿ ಲಿವ್ ಎಪ್ ಅಲ್ಲಿ ಹಾಗೂ ಯುಟ್ಯೂಬ್ ಅಲ್ಲಿ ಸಹ ನೋಡಬಹುದು.
ಶಾರ್ಕ್ ಟ್ಯಾಂಕ್ ಇಂಡಿಯಾದ ಸೀಸನ್ ೧ ರ ತೀರ್ಪುಗಾರರ ಪಟ್ಟಿ ಹೀಗಿದೆ.
- ಬೋಟ್ ಇಂಡಿಯಾದ ಸಹ ಸ್ಥಾಪಕ ಅಮಾನ್ ಗುಪ್ತಾ
- ಭಾರತ್ ಪೇ ಯ ಸಂಸ್ಥಾಪಕ ಹಾಗೂ ಸಿ ಇ ಓ ಅಶ್ನೀರ್ ಗ್ರೋವರ್
- ಶುಗರ್ ಕಾಸ್ಮೆಟಿಕ್ಸ್ ಸಿ ಇ ಓ ಹಾಗೂ ಸಹ ಸ್ಥಾಪಕ ವಿನೀತಾ ಸಿಂಘ್
- ಲೆನ್ಸ್ ಕಾರ್ಟ್ ನ ಸ್ಥಾಪಕ ಹಾಗೂ ಸಿ ಇ ಓ ಪಿಯೂಶ್ ಬನ್ಸಾಲ್
- ಎಮ್ ಕ್ಯೂರ್ ಫಾರ್ಮಾಸ್ಯೂಟಿಕಲ್ಸ್ ನ ನಿರ್ದೇಶಕಿ ನಮಿತಾ ಥಾಪರ್
- ಶಾದಿ.ಕಾಂ ನ ಸ್ಥಾಪಕ ಹಾಗೂ ಸಿ ಇ ಒ ಅನುಪಮ್ ಮಿಟ್ಟಲ್
- ಮಾಮಾ ಅರ್ಥ್ ನ ಸಹ ಸ್ಥಾಪಕಿ ಗಝಲ್ ಅಲಘ್
ಸುಮಾರು 62 ಸಾವಿರ ಸ್ಟಾರ್ಟ್ ಅಪ್ ಗಳ ಅರ್ಜಿಗಳಲ್ಲಿ 198 ಆಯ್ಕೆ ಮಾಡಿ ಶೋದಲ್ಲಿ ತೀರ್ಪುಗಾರರ ಜೊತೆ ಚರ್ಚೆ ಮಾಡುತ್ತಾರೆ. ಸುಮಾರು 47 ಕೋಟಿ ರೂ ಅನ್ನು ವಿವಿಧ ಸ್ಟಾರ್ಟ್ ಅಪ್ ಅಲ್ಲಿ ತೀರ್ಪುಗಾರರು ಹಣವನ್ನು ಈ ರಿಯಾಲಿಟಿ ಶೋದಲ್ಲಿ ಬಂಡವಾಳ ಹೂಡಿದ್ದಾರೆ.
ಶಾರ್ಕ್ ಟ್ಯಾಂಕ್ ಇಂಡಿಯಾ ಶೋ ಎಲ್ಲಿ ನೋಡಬಹುದು?
ಸೋನಿ ಲಿವ್ ಎಪ್ ಅಲ್ಲಿ ಅಥವಾ ಜಾಲ ತಾಣದಲ್ಲಿ ನೋಡಬಹುದು. ಸೋನಿ ಲಿವ್ ಜಾಲತಾಣದಲ್ಲಿ ಈಗಲೇ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಯೂಟ್ಯೂಬ್ ಅಲ್ಲೂ ಕೂಡಾ ಈ ಶೋ ಅನ್ನು ಉಚಿತವಾಗಿ ನೋಡಬಹುದು. ಈಗಲೇ ಯೂಟ್ಯೂಬ್ ಅಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಅಕಸ್ಮಾತ್ ನೀವು ಇಂಗ್ಲೀಷ್ ಅಲ್ಲಿ ಬಂದಿರುವ ಎಪಿಸೋಡ್ ಯೂಟ್ಯೂಬ್ ಅಲ್ಲಿ ಉಚಿತವಾಗಿ ನೋಡಲು ಈ ಕೆಳಗಿನ ಲಿಂಕ್ ಗಳ ಕ್ಲಿಕ್ ಮಾಡಿ.
ಕೊನೆಯ ಮಾತು
ನೀವು ಎಂಬಿಎ ಗ್ರಾಜುಯೇಟ್ ಆಗಿರಲಿ, ಇಂಜಿನಿಯರ್ ಆಗಿರಲಿ. ಅಥವಾ ರಸ್ತೆ ಬದಿ ವ್ಯಾಪಾರ ಮಾಡುವವರಾಗಲಿ. ಜಾಣತನ ಇರುವ ಉದ್ಯಮಶೀಲತೆ ನಿಮ್ಮನ್ನು ಇನ್ನೊಂದು ಮಟ್ಟಕ್ಕೆ ಒಯ್ಯಬಲ್ಲುದು.
ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋ ನಿಮಗೆ ಬೇರೆ ಸ್ಟಾರ್ಟ್ ಅಪ್ ಐಡಿಯಾಗಳು, ಯಶಸ್ವಿ ಉದ್ಯಮಿಗಳ ಯೋಚನಾ ಲಹರಿಯನ್ನು ತಿಳಿಯಲು ಅವಕಾಶ ಮಾಡಿ ಕೊಡುತ್ತದೆ.
ನಿಮಗೆ ಬಿಡುವಿದ್ದಾಗ ಒಂದೆರಡು ಎಪಿಸೋಡ್ ನೋಡಿ ಇದು ನಿಮಗೇನಾದರೂ ಉಪಯುಕ್ತವೇ ಎಂದು ಪರಿಶೀಲಿಸಿ. ಇದರಿಂದ ಒಂದಿಷ್ಟು ಕಲಿಕೆ ಸಾಧ್ಯ ಎನ್ನಿಸಿದರೆ ತಡ ಯಾಕೆ ಎಲ್ಲ ಎಪಿಸೋಡ್ ನೋಡಿ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.