Slider

ಪೋಕೊ ಎಂ4 ಪ್ರೋ 5G ಸ್ಮಾರ್ಟ್ ಫೋನ್ ಭಾರತದಲ್ಲಿ. ವಿಶಿಷ್ಟತೆ ಏನು?

ಶಿಯಾಮಿ ಅವರ ಪೋಕೊ ಎಂ4 ಪ್ರೋ 5G ಭಾರತದಲ್ಲಿ ಫೆಬ್ರವರಿ 22 2022ರಂದು ಫ್ಲಿಪ್ ಕಾರ್ಟ್ ಸೇಲ್ ಮೂಲಕ ಬಿಡುಗಡೆ ಆಗಿದೆ. ಈ ಫೋನ್ ವಿಶಿಷ್ಟತೆ ಏನು? ಬನ್ನಿ ನೋಡೋಣ.

ಬಿಡುಗಡೆ ಆಗುತ್ತಿರುವ ಎಲ್ಲ ಹೊಸ ಫೋನ್ ಗಳು ೫ಜಿ ಸೌಲಭ್ಯ ಇರುವ ಚಿಪ್ ಸೆಟ್ ಬಳಸಲಾರಂಭಿಸಿವೆ. ಯಾಕೆಂದರೆ ಸದ್ಯದಲ್ಲೇ ೫ಜಿ ತರಂಗಾಂತರವನ್ನು ಡಾಟಾ ಗೆ ಕಂಪನಿಗಳು ಬಳಸಲು ಸಿದ್ಧತೆ ನಡೆಸುತ್ತಿವೆ.

ಪ್ರಾಸೆಸರ್ (3.5/5)

ಇದೂ ಕೂಡಾ ೫ಜಿ ಫೋನ್ ಆಗಿದ್ದು ಇದು ಮಿಡಿಯಾ ಟೆಕ್ ಡೈಮೆನ್ಸಿಟಿ 810 ಮಿಡ್ ರೇಂಜ್ ಪ್ರಾಸೆಸರ್ ಹೊಂದಿದೆ. ಅದರಲ್ಲಿ ಎಂಟು ಕೋರಿನ 2.4ಗಿಗಾ ಹರ್ಟ್ಜ್ ನ  ಸಿಪಿಯು ಜೊತೆಗೆ ಮಾಲಿ-ಜಿ57 ಜಿಪಿಯು ಹೊಂದಿರುತ್ತದೆ.

ಬ್ಯಾಟರಿ (4/5)

5000ಎಂ ಎ ಏಚ್ ನ ಬ್ಯಾಟರಿ ಇದ್ದು ಒಂದು ಗಂಟೆಯಲ್ಲಿ ಪೂರ್ತಿ ಚಾರ್ಚ್ ಮಾಡಬಲ್ಲ 33ವ್ಯಾಟ್ ಫಾಸ್ಟ್ ಚಾರ್ಜ್ ಸೌಲಭ್ಯ ಇದೆ. ಟೈಪ್-ಸಿ ಪೋರ್ಟ್ ಇದು ಚಾರ್ಜಿಂಗ್ ಗೆ ಬಳಸುತ್ತದೆ. 1 ಗಂಟೆಯಲ್ಲಿ ೧೦೦% ಚಾರ್ಜ್ ಆಗುತ್ತೆ!

ಪರದೆ (4/5)

6.6 ಇಂಚಿನ ಫುಲ್ ಎಚ್ಡಿ+ (2400 * 1080) ರೆಸೊಲ್ಯೂಶನ್ ನ 90 ಹರ್ಟ್ಜ್ ನ ಐಪಿಎಸ್ ಪರದೆ ಹೊಂದಿದೆ. ಪರದೆ ಡಿಸಿಐ - ಪಿ೩ ಕಲರ್ ಗ್ಯಾಮಟ್ ಅಲ್ಲಿ ಹೆಚ್ಚಿನ ಬಣ್ಣಗಳನ್ನು ತೋರಿಸುವ ಸಾಮರ್ಥ್ಯ ಹೊಂದಿದೆ.

ಕ್ಯಾಮೆರಾ (3.5/5)

ಹಿಂದೆ 50ಎಂಪಿಯ ಎಫ್/1.8 ಮುಖ್ಯ ಕ್ಯಾಮರಾ ಹಾಗೂ 8ಮೆಗಾ ಪಿಕ್ಸೆಲ್ ನ 119 ಡಿಗ್ರಿ ವೈಡ್ ಎಂಗಲ್ ಎಫ್/2.2 ಕ್ಯಾಮೆರಾ ಗಳಿವೆ. ಫುಲ್ ಎಚ್ಡೀ 60ಪಿ ವರೆಗೆ ಮಾತ್ರ ವಿಡಿಯೋ ರೆಕಾರ್ಡಿಂಗ್ ಸಾಧ್ಯ.

ಅಕಸ್ಮಾತ್ ನಿಮಗೆ 4ಕೆ ವಿಡಿಯೋ ರೆಕಾರ್ಡಿಂಗ್ ಬೇಕಿದ್ದರೆ ಈ ಫೋನ್ ಅಲ್ಲಿ ಆಗುವದಿಲ್ಲ. ಮ್ಯಾಕ್ರೋ ಕ್ಯಾಮೆರಾ ಕೂಡಾ ಇಲ್ಲ.

ಸಧ್ಯ ಇದರಲ್ಲಿ ಗಿಮಿಕ್ ಮಾಡಲು 2ಎಂಪಿ ಮ್ಯಾಕ್ರೋ ಕ್ಯಾಮೆರಾ, ಡೆಪ್ತ್ ಸೆನ್ಸರ್ ಹೀಗೆ ಕೊಟ್ಟಿಲ್ಲ.

ಮುಂದೆ 16ಮೆಗಾ ಪಿಕ್ಸೆಲ್ ನ ಸೆಲ್ಫಿ ಕ್ಯಾಮೆರಾ ಇದೆ. ಅದೂ ಕೂಡಾ ಪರವಾಗಿಲ್ಲ.

ಬಣ್ಣಗಳು

ಹಳದಿ, ತಿಳಿ ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಪ್ಲಾಸ್ಟಿಕ್ ಬಾಡಿಯಲ್ಲಿ ಲಭ್ಯವಿರಲಿದೆ. ಇದೂ ಪೋಕೋ ಅವರ ಬ್ರಾಂಡಿಂಗ್ ಪರಿಕಲ್ಪನೆ ವಿನ್ಯಾಸ ಹೊಂದಿದೆ.

ಸೆನ್ಸರ್ ಗಳು (4/5)

ಸೈಡ್ ಫಿಂಗರ್ ಫ್ರಿಂಟ್ ಸೆನ್ಸರ್ ಇದೆ. ಹೆಚ್ಚು ಕಡಿಮೆ ಎಲ್ಲ ಸಾಮಾನ್ಯ ಸೆನ್ಸರ್ ಇದರಲ್ಲಿದೆ.

ಸಂಪರ್ಕ (5/5)

ಎರಡು ಸ್ಪೀಕರ್ ಗಳು, ಎನ್ ಎಫ್ ಸಿ, ಐ ಆರ್ ಬ್ಲಾಸ್ಟರ್, 3.5 ಆಡಿಯೋ ಜ್ಯಾಕ್ ಸಹ ಇವೆ. ಐ ಆರ್ ಬ್ಲಾಸ್ಟರ್ ಇರುವದರಿಂದ ರಿಮೋಟ್ ತರಹ ಬಳಸಬಹುದು.

ಎರಡು 5ಜಿ ಸಿಮ್  ಸಪೋರ್ಟ್ ಇದೆ. ೫ಜಿ / ೪ಜಿ / ೩ಜಿ/ ೨ಜಿ ಎಲ್ಲ ಸಪೋರ್ಟ್ ಇದೆ. ೫ಜಿಯ 13 ಗ್ಲೋಬಲ್ ಬ್ಯಾಂಡ್ ಅನ್ನು ಸಪೋರ್ಟ್ ಮಾಡುತ್ತದೆ. ಬ್ಲ್ಯೂಟೂತ್ 5.1 ಇದೆ.

ಸ್ಟೋರೇಜ್ ಮತ್ತು ಮೆಮರಿ (5/5)

1 ಟೆರ್ರಾ ಬೈಟ್ ವರೆಗಿನ ಮೈಕ್ರೋ ಎಸ್ ಡಿ ಕಾರ್ಡ್ ಅನ್ನು ಈ ಫೋನ್ ಜೊತೆ ಬಳಸಬಹುದು.

4ಜಿಬಿ + 64ಜಿಬಿ, 6ಜಿಬಿ + 128ಜಿಬಿ, 8ಜಿಬಿ + 128ಜಿಬಿ ವರ್ಶನ್ ಗಳಿದ್ದು 15 ಸಾವಿರ, 17 ಸಾವಿರ,  19 ಸಾವಿರ ಅನುಕ್ರಮ ವಾಗಿ ಅವುಗಳ ಬೆಲೆ ಇರಲಿವೆ.

ಆಕಾರ (5/5)

195 ಗ್ರಾಂ ತೂಕದ ಈ ಫೋನ್ 163.56ಮಿಲಿ ಮೀ ಎತ್ತರ, 75.78ಮಿಮಿ ಅಗಲ, 8.75ಮಿಮಿ ದಪ್ಪ ಇದೆ.

ಸಾಫ್ಟವೇರ್ (4/5)

ಅಂಡ್ರಾಯಿಡ್ ೧೧ ಆಧಾರಿತ ಎಂಐ ಯುಐ ೧೨.೫ ಆಪರೇಟಿಂಗ್ ಸಿಸ್ಟೆಮ್ ಇದೆ. ಈಗಾಗಲೇ ಆಂಡ್ರಾಯಿಡ್ ೧೨ ಮಾರುಕಟ್ಟೆಯಲ್ಲಿದೆ. ಅದನ್ನು ಕೊಟ್ಟಿದ್ದರೆ ಚೆನ್ನಾಗಿತ್ತು. 

ಗಮನಿಸಿ ಇದು ಕಳೆದ ಡಿಸೆಂಬರ್ ೨೦೨೧ರಲ್ಲಿ ಬಿಡುಗಡೆ ಆಗಿದ್ದ ರೆಡ್ ಮಿ ನೋಟ್ 11ಟಿಯ ರಿಬ್ರಾಂಡಡ್ ಫೋನ್ ಆಗಿದೆ.

ಫೆಬ್ರವರಿ 22 2022ರಂದು ಫ್ಲಿಪ್ ಕಾರ್ಟ್ ಸೇಲ್ ಮೂಲಕ ಬಿಡುಗಡೆ ಆಗಿದೆ.  ೪ಕೆ ವಿಡಿಯೋ ರೆಕಾರ್ಡಿಂಗ್ ಇಲ್ಲ ಎನ್ನುವದು ಒಂದು ಇದರ ಕೊರತೆ ಎನ್ನಬಹುದು. ಆದರೆ ಆ ಸೌಲಭ್ಯ ಎಲ್ಲರಿಗೂ ಬೇಕಾಗದು. ಅದನ್ನು ಹೊರತು ಪಡಿಸಿದರೆ ಉತ್ತಮ ಸ್ಕ್ರೀನ್, ವೇಗದ ಪ್ರಾಸೆಸರ್, ಜಾಸ್ತಿ ಮೆಮರಿ, ಎಲ್ಲ ರೀತಿಯ ಸೆನ್ಸರ್ ಗಳು ಲಭ್ಯವಿದೆ. ಒಟ್ಟಿನಲ್ಲಿ ಇದು ಹಣಕ್ಕೆ ತಕ್ಕ ಮೌಲ್ಯ ಫೋನ್ ಎನ್ನಬಹುದು. ನೆನಪಿಡಿ ಇದು ಮಧ್ಯಮ ಶ್ರೇಣಿಯ ಫೋನ್ ಆಗಿದೆ. ಇಲ್ಲಿ ಕ್ಯಾಮೆರಾ  ಹಾಗೂ ಪ್ರಾಸೆಸರ್ ಮಿಡಲ್ ರೇಂಜ್ ಬಳಕೆ ಆಗಿದೆ.

ಲಾಭಗಳು

  • ಕ್ಯಾಮರಾ ಫೋಟೋ ತೆಗೆಯಲು ಪರವಾಗಿಲ್ಲ. ಕಡಿಮೆ ಬೆಳಕಿನ ಸಾಮರ್ಥ್ಯ ಇಲ್ಲ.
  • ದೊಡ್ಡ ೫೦೦೦ ಎಂಎ ಎಚ್ ಬ್ಯಾಟರಿ
  • ವೇಗದ ಪ್ರಾಸೆಸರ್
  • ೫ಜಿ ಸೌಲಭ್ಯ
  • ಎಲ್ಲ ಸೆನ್ಸರ್ ಗಳು ಇವೆ
  • ಸ್ಟಿರಿಯೋ ಸ್ಪೀಕರ್ ಗಳಿವೆ
  • ೩.೫ ಆಡಿಯೋ ಜ್ಯಾಕ್ ಇದೆ
  • ಎಸ್ ಡಿ ಕಾರ್ಡ್ ಸಹ ಬಳಸಬಹುದು
  • ಫಾಸ್ಟ್ ಚಾರ್ಜಿಂಗ್ ಇದೆ. ಒಂದು ಗಂಟೆಯಲ್ಲಿ ಚಾರ್ಜ್ ಆಗುತ್ತೆ.

ಕೊರತೆಗಳು

  • ೪ಕೆ ವಿಡಿಯೋ ರೆಕಾರ್ಡಿಂಗ್ ಸಾಧ್ಯವಿಲ್ಲ. 
  • ಆಪ್ಟಿಕಲ್ ಸ್ಟೆಬಿಲೈಜೇಶನ್ ಇಲ್ಲ.
  • ಪರದೆ ಅಮೋಲ್ಡ್ ಅಲ್ಲ. ಆದರೂ ಪರದೆ ೯೦ ಹರ್ಟ್ಜ್ ರೆಫ್ರೆಶ್ ರೇಟ್ ಇದ್ದು ಡಿಸಿಐ-ಪಿ೩ ಬಣ್ಣಗಳನ್ನು ತೋರಿಸುವ ಸಾಮರ್ಥ್ಯ ಹೊಂದಿದೆ.
  • ಟೆಲಿಫೋಟೋ ಹಾಗೂ ಮ್ಯಾಕ್ರೋ ಕ್ಯಾಮೆರಾ ಇಲ್ಲ.
  • ಅಂಡ್ರಾಯಿಡ್ ೧೧ ಇದೆ ೧೨ ಇಲ್ಲ. ಆದರೆ ೧೨ರ ಅಪ್ ಡೇಟ್ ಬರಲಿದೆ.
  • ಪ್ಲಾಸ್ಟಿಕ್ ಬಾಡಿ ಆದರೂ ಚೀಪ್ ಅನಿಸದು.

ರೇಟಿಂಗ್


ಮೇಲಿನ ಚಿತ್ರದಲ್ಲಿ ನಮ್ಮ ಪ್ರಕಾರ ಈ ಫೋನ್ ರೇಟಿಂಗ್ ಕಾಣ ಬಹುದು. ಪರದೆ ಅಮೋಲ್ಡ್ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. 

ಕ್ಯಾಮೆರಾ ಚಲಿಸುತ್ತಿರುವ ವಸ್ತು ಸೆರೆ ಹಿಡಿಯುವಾಗ ಸ್ವಲ್ಪ ಬ್ಲರ್ ಆಗುವ ಸಾಧ್ಯತೆ, ಕಡಿಮೆ ಬೆಳಕಲ್ಲಿ ಚಿತ್ರ ಹಿಡಿಯುವ ಸಾಮರ್ಥ್ಯ ಮುಂತಾದ ಕಡೆ ಇಂಪ್ರೂವ್ ಮೆಂಟ್ ಅಗತ್ಯ ಇದೆ. ಆದರೆ ಸಾಮಾನ್ಯ ಬಳಕೆಗೆ ಈ ಬಜೆಟ್ ಅಲ್ಲಿ ಉತ್ತಮ ಕ್ಯಾಮರಾ ಅನ್ನ ಬಹುದು.

ಗೇಮಿಂಗ್ ಆಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಅತ್ಯುತ್ತಮ ಗೇಮಿಂಗ್ ಅನುಭವ ಹೈ ರಿಫ್ರೆಶ್ ರೇಟ್ ಅಲ್ಲಿ ಆಡಲು ಸ್ಮಾರ್ಟ್ ಫೋನ್ ನೀವು ಹುಡುಕುತ್ತಿದ್ದರೆ ಇದು ಸೂಕ್ತ ಅಲ್ಲ.

ಸಾಧಾರಣ ಕಡಿಮೆ ಬೆಳಕಲ್ಲಿ ಫೋಟೋ ತೆಗೆಯುವ ಸಾಮರ್ಥ್ಯ, ೪ಕೆ ವಿಡಿಯೋ ರೆಕಾರ್ಡಿಂಗ್ ಇಲ್ಲದಿರುವದರಿಂದ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್ ಇಲ್ಲ. ಆದ್ದರಿಂದ ನೀವು ವ್ಲಾಗ್ಗರ್ ಅಥವಾ ಕಂಟೆಂಟ್ ಕ್ರಿಯೆಟರ್ ಆಗಿದ್ದರೆ ಈ ಫೋನ್ ಸೂಕ್ತ ಅಲ್ಲ. ನೀವು ಬಿಗಿನರ್ ಆಗಿದ್ದರೆ ಪರವಾಗಿಲ್ಲ.

ಆದರೆ ದಿನ ಬಳಕೆಗೆ, ಸಾಮಾಜಿಕ ತಾಣ ಅಪ್ಲೋಡ್, ವಿಡಿಯೋ ಕಾಲ್ ಇತ್ಯಾದಿ ಬಳಕೆಗೆ ಈ ಫೋನ್ ಉತ್ತಮ.

ಕೊನೆಯ ಮಾತು

ಒಟ್ಟಿನಲ್ಲಿ ಪೋಕೋ ಎಂ4 ಪ್ರೋ 5G ಸ್ಮಾರ್ಟ್ ಫೋನ್ ಹಣಕ್ಕೆ ತಕ್ಕ ಮೌಲ್ಯ ನೀಡುವ ಉತ್ತಮ ಫೋನ್ ಎನ್ನ ಬಹುದು. ನಿಮ್ಮ ಬಜೆಟ್ 17 ಸಾವಿರದ ಒಳಗಿದ್ದರೆ ಈ ಫೋನ್ ಉತ್ತಮ. 

ಅಕಸ್ಮಾತ್ ಸ್ವಲ್ಪ ಬಜೆಟ್ ಜಾಸ್ತಿ ಮಾಡಿದರೆ ಈ ಕೆಳಗೆ ಕೆಲವು ಇನ್ನೂ ಉತ್ತಮ ಸೌಲಭ್ಯ ಇರುವ ಫೋನ್ ನೀಡಲಾಗಿದೆ.

ನೀವು ವ್ಲಾಗ್ಗರ್, ಕಂಟೆಂಟ್ ಕ್ರಿಯೇಟರ್ ಆಗಿದ್ದರೆ ಈ ಫೋನ್ ಸೂಕ್ತ ಅಲ್ಲ. ಏಕೆಂದರೆ ೪ಕೆ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಇಲ್ಲ.

ಫೆಬ್ರವರಿ ೨೧ ೨೦೨೨ ರಿಂದ ಶಿಯೋಮಿ ಅವರದ್ದೇ ಆದ ರೆಡ್ಮಿ ನೋಟ್ ೧೧ಎಸ್ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಅಲ್ಲಿ ಅಮೋಲ್ಡ್ ಡಿಸ್ಪ್ಲೇ ಹಾಗೂ ೧೦೮ ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಅಂಡ್ರಾಯಿಡ್ ೧೧ ಆಧಾರಿತ ಎಂಐ ಯುಐ 13 ಆಪರೇಟಿಂಗ್ ಸಿಸ್ಟೆಮ್ ಇದೆ. ಅದೂ ಕೂಡಾ ಹೆಚ್ಚು ಕಡಿಮೆ ಇದೇ ಬೆಲೆಗೆ ಸಿಗಲಿದೆ. ಆದರೆ ಗಮನದಲ್ಲಿರಲಿ ಅದು ೪ಜಿ ಫೋನ್. ಇನ್ನೂ ಎಲ್ಲೂ ೫ಜಿ ನೆಟ್ ವರ್ಕ್ ಸೌಲಭ್ಯವೇ ಇಲ್ಲ. ಬಂದರೂ ೪ಜಿ ಸೇವೆ ಇನ್ನೂ ಹಲವು ವರ್ಷ ಲಭ್ಯ ಇರಲಿದೆ. ಆದ್ದರಿಂದ ಅದೇನು ಸಮಸ್ಯೆ ಅಲ್ಲ.

ನಿಮ್ಮ ಬಜೆಟ್ 25 ಸಾವಿರದ ವರೆಗೆ ಇದ್ದರೆ ನೀವು ಸ್ಯಾಮ್ ಸಂಗ್ ಎಂ52 ೫ಜಿ ಕಡೆ ಒಮ್ಮೆ ನೋಡಿ. ಅದರಲ್ಲಿ ಇನ್ನೂ ವೇಗದ ಸ್ನ್ಯಾಪ್ ಡ್ರಾಗನ್ 778ಜಿ ಪ್ರಾಸೆಸರ್, ೧೨೦ಹರ್ಟ್ಜ್ ನ ಸೂಪರ್ ಅಮೋಲ್ಡ್ ತೆರೆ, 64ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ, 12ಎಂಪಿ 123 ಡಿಗ್ರೀ ವೈಡ್ ಕ್ಯಾಮೆರಾ, 5ಎಂಪಿ ಮ್ಯಾಕ್ರೋ ಕ್ಯಾಮೆರಾ ಹಿಂದೆ, 32ಮೆಗಾ ಪಿಕ್ಸೆಲ್ ಮುಂದೆ ಕ್ಯಾಮೆರಾ, 4ಕೆ ವಿಡಿಯೋ ರೆಕಾರ್ಡಿಂಗ್ ಹಿಂದಿನ ಕ್ಯಾಮೆರಾ ಮೂಲಕ ಎಲ್ಲ ಜಾಸ್ತಿ ಇದೆ. ಆದರೆ ಅದರಲ್ಲಿ 3.5 ಆಡಿಯೋ ಜ್ಯಾಕ್ ಇಲ್ಲ.

ನಿಮ್ಮ ಬಜೆಟ್ 40 ಸಾವಿರದ ಹತ್ತಿರ ಇದ್ದರೆ ಒನ್ ಪ್ಲಸ್ 9ಆರ್ ಟಿ 5ಜಿ ಕೂಡಾ ಒಮ್ಮೆ ನೋಡಿ. 30ಸಾವಿರ ಕ್ಕೆ ಒನ್ ಪ್ಲಸ್ ನೊರ್ಡ್ 2 5ಜಿ ಇದೆ. ನಿಮಗೆ ಕಾಸಿಗೆ ತಕ್ಕ ಕಜ್ಜಾಯ ಸಿಗುವದಂತೂ ಗ್ಯಾರಂಟಿ. 

ಇನ್ನು ಒನ್ ಪ್ಲಸ್ 9 ಪ್ರೋ 5ಜಿ  ಫ್ಲ್ಯಾಗ್ ಶಿಪ್ ಫೋನ್ ಸಹ ಇದೆ. ಇದೇ ಮಾರ್ಚ್ ಅಲ್ಲಿ ಒನ್ ಪ್ಲಸ್ 10 ಪ್ರೋ 5ಜಿ ಕೂಡಾ ಮಾರುಕಟ್ಟೆಗೆ ಬರಲಿದೆ. ಆಗ ಒನ್ ಪ್ಲಸ್ 9 ಪ್ರೋ 5ಜಿ ಬೆಲೆ ಕೂಡಾ ಕಡಿಮೆ ಆದರೂ ಆಶ್ಚರ್ಯ ಇಲ್ಲ.

ಅಕಸ್ಮಾತ್ ನಿಮಗೆ 5ಜಿ ಬೇಡ ಎಂದರೆ 4ಜಿ ಇರೋ ಫೋನ್ ಅನ್ನು ಕಡಿಮೆ ಬೆಲೆಗೆ ಸಹ ಖರೀದಿಸಬಹುದು. ಯಾಕೆಂದರೂ ಇನ್ನೂ ಭಾರತದಕ್ಕೆ ೫ಜಿ ಬಂದಿಲ್ಲ. ಅವುಗಳ ಬೆಲೆಯೂ ಜಾಸ್ತಿ. ಹಾಗೂ ಡ್ಯುಯಲ್ ಬ್ಯಾಂಡ್ ವೈಫೈ ಇರುವ ಫೋನ್ ಖರೀದಿಸಿದರೆ ವೈಫೈ ಅಲ್ಲೇ ಜಾಸ್ತಿ ವೇಗದ ಇಂಟರ್ನೆಟ್ ಪಡೆದುಕೊಳ್ಳಬಹುದು. ಪೋಕೊ ಎಂ೪ ಪ್ರೋ ಇದರ ೪ಜಿ ವರ್ಶನ್ ಕೂಡಾ ಮಾರುಕಟ್ಟೆಗೆ ಬರಲಿದೆ. ಅದು ಅಮೋಲ್ಡ್ ತೆರೆ ಹೊಂದಿರಲಿದೆ.

ಆದರೆ 17 ಸಾವಿರ ಬಜೆಟ್ ಮಿತಿಯಲ್ಲಿ ಪೋಕೋ ಉತ್ತಮ ಮಧ್ಯಮ ರೇಂಜಿನ ಫೋನ್ ಅನ್ನುವದರಲ್ಲಿ ಎರಡು ಮಾತಿಲ್ಲ. ಇದು ಗೇಮ್ ಆಡಲೂ ಸಹ ಸೂಕ್ತ.

ನೀವು ಪೋಕೊ ಫೋನ್ ಬಳಸಿದ್ದೀರಾ? ನಿಮ್ಮ ಅನಿಸಿಕೆ ಏನು?

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ