ಇಂದು ಕಾರನ್ನು ಚಲಾಯಿಸುವಾಗ ದಾರಿ ನೋಡಲು ಜಿಪಿಎಸ್ ಬಳಸುವದು ಸಾಮಾನ್ಯ. ಮೊದಲು ಜಿಪಿಎಸ್ ಗೆ ಪ್ರತ್ಯೇಕ ಡಿವೈಸ್ ಇರುತ್ತಿತ್ತು.
ಕ್ರಮೇಣ ಸ್ಮಾರ್ಟ್ ಫೋನ್ ಗಳು ಆ ಜಿಪಿಎಸ್ ಯಂತ್ರ ಅನ್ನು ಸ್ಥಾನ ಪಲ್ಲಟ ಮಾಡಿತು. ಇಂದು ಓಲಾ, ಉಬರ್ ಚಾಲಕರೂ ಕೂಡಾ ಕಾರು ಓಡಿಸುವಾಗ ಸ್ಮಾರ್ಟ್ ಫೋನ್ ಅನ್ನು ಓಲಾ/ಉಬರ್ ಗ್ರಾಹಕರನ್ನು ಒಯ್ಯುವ ದಾರಿ ನೋಡಲು ಹಾಗು ಬಿಲ್ಲಿಂಗ್ ಇತ್ಯಾದಿ ಗಳಿಗೆ ಬಳಸುತ್ತಾರೆ.
ಕಾರಲ್ಲಿ ಈ ಜಿಪಿಎಸ್ ಎಪ್ ಅಥವಾ ಒಲಾ/ಉಬರ್ ಎಪ್ ಬಳಸುವಾಗ ನಾವು ಸರಿಯಾದ ದಾರಿಯಲ್ಲಿ ಇದ್ದೇವೆಯೇ ಅನ್ನುವದಕ್ಕೆ ಪದೇ ಪದೇ ಸ್ಮಾರ್ಟ್ ಫೋನ್ ನೋಡುತ್ತಾ ಇರಬೇಕು. ಇದಕ್ಕೆ ಸ್ಮಾರ್ಟ್ ಫೋನ್ ಹೋಲ್ಡರ್ ಅರ್ಥಾತ್ ಮೊಬೈಲ್ ಹೋಲ್ಡರ್ ಕಾರಲ್ಲಿ ಇದ್ದರೆ ಅನುಕೂಲ.
ನಾನು ಹಲವು ಬಗೆಯ ಸ್ಮಾರ್ಟ್ ಫೋನ್ ಹೋಲ್ಡರ್ ಬಳಸಿ ನೋಡಿದ್ದೇನೆ. ನನ್ನ ಅನುಭವ ಇಲ್ಲಿ ತಿಳಿಸುತ್ತೇನೆ.
{tocify} $title={ವಿಷಯ ಸೂಚಿ}
ಮೊಬೈಲ್ ಹೋಲ್ಡರ್ ಇಲ್ಲದಿದ್ದರೆ ಏನಾಗುತ್ತೆ?
ಡ್ರೈವ್ ಮಾಡುವಾಗ ಫೋನ್ ಬಳಸ ಬಾರದು ನಿಜ. ಆದ್ರೆ ಇಂದು ಓಲಾ / ಉಬರ್ ಡ್ರೈವರ್ ಗಳಿಗೆ, ಹೊಸ ಜಾಗಕ್ಕೆ ಹೋದಾಗ ಕಾರ್ ಮಾಲೀಕರಿಗೆ ಜಿಪಿಎಸ್ ಬೇಕೆ ಬೇಕು. ಇನ್ನು ಕೆಲವರಿಗೆ ಟ್ರಾಫಿಕ್ ಅಲ್ಲಿದ್ದಾಗ ಸಮಯ ಕಳೆಯಲೂ ಸಹ ಬೇಕು.
ಕಾರಲ್ಲಿ ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ಬಳಸುವದು ಅಪಾಯಕಾರಿ. ಅದಕ್ಕೆ ಬದಲು ಮೊಬೈಲ್ ಹೋಲ್ಡರ್ ಬಳಸಿ ಫೋನ್ ಡ್ಯಾಶ್ ಬೋರ್ಡ್ ಗೆ ಅಟ್ಯಾಚ್ ಮಾಡಿ ಬಳಸುವದು ಉತ್ತಮ.
ಮೊಬೈಲ್ ಹೋಲ್ಡರ್ ಇಲ್ಲದಿದ್ದರೆ ಆಗುವ ಸಮಸ್ಯೆ ಹಲವು
- ಜಿಪಿ ಎಸ್ ದಾರಿ ನೋಡಲು ಪದೇ ಪದೇ ಫೋನ್ ಅನ್ ಲಾಕ್ ಮಾಡಿ ನೋಡಬೇಕು.
- ಇಲ್ಲಾಂದ್ರೆ ಫೋನ್ ಕೆಳಗಿದ್ದರೆ ರಸ್ತೆ ಕಡೆ ಗಮನ ಕಡಿಮೆ ಆಗುತ್ತೆ.
- ಒಂದು ಕೈಯಲ್ಲಿ ಮೊಬೈಲ್ ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಕೊಂಡು ಸರ್ಕಸ್ ಮಾಡಬೇಕು.
- ಫೋನ್ ಕೈಯಿಂದ ಬೀಳುವ ಸಾಧ್ಯತೆ.
- ಫೋನ್ ಅಲ್ಲಿ ದಾರಿ ನೋಡುವಾಗ ಗಮನ ತಪ್ಪಿ ಅಪಘಾತ ಆಗುವ ಸಾಧ್ಯತೆ.
ಮೊಬೈಲ್ ಹೋಲ್ಡರ್ ಬಗೆಗಳು
ಮೊಬೈಲ್ ಹೋಲ್ಡರ್ ಗಳು ಹಲವು ರೀತಿಯವು.
- ಫ್ರಂಟ್ (ಮುಂದಿನ) ಗ್ಲಾಸ್ ಮೇಲೆ ಅಂಟುವ ಹೋಲ್ಡರ್ ಗಳು
- ಡ್ಯಾಶ್ ಬೋರ್ಡ್ ಮೇಲೆ ಅಂಟುವ ಹೋಲ್ಡರ್ ಗಳು
- ಎಸಿ ಮೇಲೆ ಕೂರುವ ಹೋಲ್ಡರ್ ಗಳು
ಮೊಬೈಲ್ ಹೋಲ್ಡರ್ ಅಂಟೋದು ಹೇಗೆ?
ಕೆಲವು ಹೋಲ್ಡರ್ ಗಳು ವೆಕ್ಯೂಮ್ ಕಪ್ ತಂತ್ರ ಬಳಸಿ ಅಂಟಿದರೆ ಇನ್ನು ಕೆಲವು ರೆಸಿನ್ ಬಳಸಿ ಅಂಟುತ್ತವೆ. ಇನ್ನು ಕೆಲವು ಕ್ಲಿಪ್ ಬಳಸಿ ಗಟ್ಟಿಯಾಗಿ ಕೂರುತ್ತವೆ.
ವೆಕ್ಯೂಮ್ ಕಪ್ ಗಳು ಕಾಲಕ್ರಮೇಣ ಬಿಸಿಲು ಬಿದ್ದು ಶಕ್ತಿ ಕಳೆದು ಹಾಳಾಗುತ್ತವೆ. ರೆಸಿನ್ ಕೆಲವು ಕಾಲ ಕಳೆದಂತೆ ಶಕ್ತಿ ಕಳೆದರೆ, ಉತ್ತಮ ರೆಸಿನ್ ಆದರೆ ತೆಗೆಯಲಾಗದಷ್ಟು ಗಟ್ಟಿಯಾಗಿ ಗ್ಲಾಸ್ ಅನ್ನೋ ಡ್ಯಾಶ್ ಬೋರ್ಡ್ ಅನ್ನು ಹಾಳು ಮಾಡುತ್ತವೆ.
ಅಂತೂ ಮೊಬೈಲ್ ಹೋಲ್ಡರ್ ಅಂಟೋದು ಈ ಮೂರರಲ್ಲಿ ಒಂದು ಅಥವಾ ಹೆಚ್ಚಿನ ವಿಧಾನದಿಂದ
- ವೆಕ್ಯೂಮ್ (ನಿರ್ವಾತ) ಸಿಲಿಕೋನ್ ಅಥವಾ ರಬ್ಬರ್ ಕಪ್
- ಅಂಟು ಅಥವಾ ರೆಸಿನ್
- ಕ್ಲಿಪ್
ಮೊಬೈಲ್ ಹೋಲ್ಡರ್ ಗ್ರಿಪ್ ಮುಖ್ಯ ಯಾಕೆ?
ನೆನಪಿಡಿ ಎಲ್ಲಿಯಾದರೋ ಹಂಪ್ ಬಂತು ಎಂದು ಗಾಡಿ ಜಂಪ್ ಆದಾಗ ಮೊಬೈಲ್ ಹೋಲ್ಡರ್ ಬಿದ್ದರೆ ಅಥವಾ ಸ್ಮಾರ್ಟ್ ಫೋನ್ ಕಳಚಿ ಬಿದ್ದರೆ ಅದರ ಕಥೆ ಅಷ್ಟೇ! ಅಲ್ವಾ?
ಅದಕ್ಕೆ ಉತ್ತಮ ಗ್ರಿಪ್ ಇರುವ ಹಾಗೂ ಗಟ್ಟಿಯಾಗಿ ಅಂಟುವ ಮೊಬೈಲ್ ಹೋಲ್ಡರ್ ಬೇಕು. ಹಾಗೂ ನಿಮ್ಮ ಮೊಬೈಲ್ ಮೇಲೆ ಕೂಡಾ ತೀರಾ ಪ್ರೆಶರ್ ಹಾಕ ಬಾರದು ಹಾಗೂ ಕುಶನ್ ಕೂಡಾ ಇರಬೇಕು. ಅದು ಕೂಡಾ ಮುಖ್ಯ.
ಕ್ಲಿಪ್ ಇರುವ ಮೊಬೈಲ್ ಹೋಲ್ಡರ್ ಆಗಿದ್ದರೆ ನನ್ನ ಪ್ರಕಾರ ಉತ್ತಮ. ಕ್ಲಿಪ್ ಹೋಲ್ಡರ್ ಬಾಳಿಕೆ ಜಾಸ್ತಿ.
ಒಟ್ಟಿನಲ್ಲಿ ಮೊಬೈಲ್ ಹೋಲ್ಡರ್ ನಿಮ್ಮ ದುಬಾರಿ ಸ್ಮಾರ್ಟ್ ಫೋನ್ ಅನ್ನು ಬೀಳದಂತೆ ಹಿಡಿದು ಅದು ಕೂಡಾ ಬೀಳಬಾರದು. ಇಲ್ಲಾಂದ್ರೆ ಬಿದ್ದು ನಿಮ್ಮ ಸ್ಮಾರ್ಟ್ ಫೋನಿನ ಪರದೆ ಒಡೆದು ಹೋಗುವ ಸಾಧ್ಯತೆ ಇದೆ.
ಮೊಬೈಲ್ ಹೋಲ್ಡರ್ ನಲ್ಲಿನ ಸಮಸ್ಯೆಗಳು
ನಾನು ಬಳಸಿದ ಮೊಬೈಲ್ ಹೋಲ್ಡರ್ ಗಳಲ್ಲಿ ಕಂಡ ಸಮಸ್ಯೆಗಳು ಹೀಗಿವೆ.
- ಬಿಸಿಲಲ್ಲಿ ನಿಲ್ಲಿಸಿದಾಗ ವೆಕ್ಯೂಮ್ ಕಪ್ ಬಿಸಿ ಆಗಿ ಮೆತ್ತಗಾಗಿ ಸ್ಮಾರ್ಟ್ ಫೋನ್ ಸಮೇತ ಬೀಳುವದು.
- ರೆಸಿನ್ ಹಾಕಿ ಅಂಟಿಸಿದಾಗ ಗಟ್ಟಿಯಾಗಿ ಅಂಟದಿರುವದು, ಅಕಸ್ಮಾತ್ ಗಟ್ಟಿಯಾಗಿ ಅಂಟಿದರೆ ತೆಗೆಯಲು ಆಗದಂತೆ ಹಾಳು ಮಾಡುವದು.
- ಹೋಲ್ಡರ್ ಮೊಬೈಲ್ ಅನ್ನು ಗಟ್ಟಿಯಾಗಿ ಹಿಡಿಯದೇ ಮೊಬೈಲ್ ಬಿದ್ದು ಹೋಗುವದು.
ನನ್ನ ಮೆಚ್ಚಿನ ಮೊಬೈಲ್ ಹೋಲ್ಡರ್
ಹೀಗೆ ಹಲವು ಮೊಬೈಲ್ ಹೋಲ್ಡರ್ ಹೋಲಿಕೆ ಮಾಡಿ ಬಳಸಿ ನೋಡಿದಾಗ ನನಗೆ ಅಂತಿಮವಾಗಿ ಇಷ್ಟವಾಗಿದ್ದು ಈ ಮೊಬೈಲ್ ಹೋಲ್ಡರ್. ಯಾವುದು? ಮುಂದೆ ನೋಡಿ.
ಈ ಮೊಬೈಲ್ ಹೋಲ್ಡರ್ ಕ್ಲಿಪ್ ಆಧಾರಿತ ಆಗಿದ್ದು ಗಟ್ಟಿಯಾಗಿ ಎಸಿ ವೆಂಟ್ ಗೆ ಅಂಟಿಕೊಳ್ಳುತ್ತದೆ. ಅಷ್ಟೇ ಅಲ್ಲ ಮೊಬೈಲ್ ಅನ್ನು ಗಟ್ಟಿಯಾಗಿ ಹಿಡಿಯಲು ಗ್ರಿಪ್ ಇದ್ದು ಹಿಂಬದಿ ಒಂದು ಬಟನ್ ಇದ್ದು ಅದನ್ನು ಪ್ರೆಸ್ ಮಾಡಿದರೆ ತಕ್ಷಣ ಮೊಬೈಲ್ ರಿಲೀಸ್ ಆಗುತ್ತದೆ.
ಈ ಹೋಲ್ಡರ್ ಎಸಿ ವೆಂಟ್ ಗೆ ಫಿಕ್ಸ್ ಆಗಿದ್ದಾಗಲೇ ಸುಲಭವಾಗಿ ಸ್ಮಾರ್ಟ್ ಫೋನ್ ಹಾಕಿ ತೆಗೆಯಬಹುದು. ಫೋನ್ ಹೋಲ್ಡರ್ ಅಲ್ಲಿದ್ದಾಗ ಯಾವುದೇ ಸಮಸ್ಯೆ ಇಲ್ಲದೇ ಆಪರೇಟ್ ಮಾಡಬಹುದು.
ಕ್ಲಿಪ್ ಗೆ ಎರಡು ಲಾಕ್ ಇದ್ದು ಒಂದನ್ನು ತೆಳು ಬ್ಲೇಡ್ ಇರುವ ಎಸಿ ವೆಂಟ್ ಬಾಗಿಲಿಗೂ ಇನ್ನೊಂದನ್ನು ದಪ್ಪ ಬ್ಲೇಡ್ ಇರುವ ಎಸಿ ವೆಂಟ್ ಗೆ ಬಳಸಬಹುದು. ನನ್ನ ಎರ್ಟಿಗಾ ಕಾರಿಗೆ ದಪ್ಪ ಬ್ಲೇಡ್ ಬಾಗಿಲಿದ್ದು ಲಾಕ್ ೧ ಬಳಸಿ ಫಿಕ್ಸ್ ಮಾಡಲಾಯ್ತು. ತೆಳ್ಳನೆಯ ಬ್ಲೇಡ್ ಇದ್ದರೆ ಲಾಕ್ ೨ ಬಳಸಬಹುದು.
ಮೊಬೈಲ್ ಹಿಡಿಯುವ ಗ್ರಿಪ್ ಹಾಗೂ ಹಿಂಬದಿ ಕ್ಲಿಪ್ ಎರಡೂ ಕಡೆ ರಬ್ಬರ್ ಕುಶನ್ ಇದೆ. ಇದು ನಿಮ್ಮ ಫೋನ್ ಅಥವಾ ಎಸಿ ವೆಂಟ್ ಬ್ಲೇಡ್ ಹಾಳಾಗದಂತೆ / ಸ್ಕ್ರ್ಯಾಚ್ ಆಗದಂತೆ ತಡೆಯುತ್ತದೆ.
ಇದು ಫ್ರಂಟ್ ಗ್ಲಾಸ್ ಗೆ ಕೂಡಾ ಅಡ್ಡ ಆಗುವದಿಲ್ಲ. ಡ್ರೈವಿಂಗ್ ಮಾಡುವಾಗ ರಸ್ತೆ ನೋಡುತ್ತಾ ಮ್ಯಾಪ್ ನೋಡಲು ಬಲ ಅಥವಾ ಎಡ ಭಾಗದಲ್ಲಿರೋ ಮೊಬೈಲ್ ನೋಡಿದರಾಯ್ತು.
ಅಕಸ್ಮಾತ್ ಹೆಚ್ಚಿನ ವಿವರ ಬೇಕಿದ್ದಲ್ಲಿ ಅಮೇಜಾನ್ ತಾಣದಲ್ಲಿ ಇದರ ವಿವರ ನೋಡಿ. ನೆನಪಿಡಿ ಇದು ನನ್ನ ಅಫಿಲಿಯೇಟ್ ಲಿಂಕ್ ಆಗಿದೆ. ನಿಮಗೆ ಯಾವುದೆ ಹೊರೆ ಆಗದೇ ಅದೇ ಡಿಸ್ಕೌಂಟ್ ಅಲ್ಲಿ ಸಿಗುತ್ತದೆ. ನಮ್ಮ ಕನ್ನಡ ಕೆಲಸಕ್ಕೆ ಸಹಾಯ ಆಗುತ್ತದೆ.
ಕೊನೆಯ ಮಾತು
ನನ್ನ ಅನುಭವದ ಪ್ರಕಾರ ಗ್ಲಾಸ್ ಗೆ ಅಂಟುವ ಮೊಬೈಲ್ ಹೋಲ್ಡರ್ ಜಾಸ್ತಿ ಬಾಳಿಕೆ ಬರುವದಿಲ್ಲ. ಬಿಸಿಲು ಬಿದ್ದು ಬಿದ್ದು ಅದರ ವ್ಯಾಕ್ಯೂಮ್ ಕಪ್ ಹಾಳಾಗುವದು ಜಾಸ್ತಿ. ಡ್ಯಾಶ್ ಬೋರ್ಡ್ ಗೆ ಅಂಟುವ ಮೊಬೈಲ್ ಹೋಲ್ಡರ್ ಕಥೆನೂ ಅಷ್ಟೇ.
ಅಷ್ಟೇ ಅಲ್ಲ ಕೆಲವು ಸಲ ಈ ಮೊಬೈಲ್ ಹೋಲ್ಡರ್ ಫಿಕ್ಸ್ ಮಾಡಿದಾಗ ನಮ್ಮ ಹೊರ ನೋಟಕ್ಕೆ ಅಡ್ಡಿ ಆಗುವದುಂಟು. ಆಗ ಡೈವಿಂಗ್ ಮಾಡುವಾಗ ಫ್ರಂಟ್ ಗ್ಲಾಸ್ ವೀವ್ ಕಡಿಮೆ ಆಗಿ ಮೊಬೈಲ್ ರಸ್ತೆ ನೋಡುವದಕ್ಕೆ ಅಡ್ಡ ಆಗುತ್ತೆ.
ನಿಮ್ಮ ಕಾರಲ್ಲಿ ಡ್ರೈವರ್ ಸೀಟ್ ಬಳಿ ಬಲ ಭಾಗದಲ್ಲಿ ಎಸಿ ವೆಂಟ್ ಇದ್ದರೆ ಆಗ ಎಸಿ ವೆಂಟ್ ಗೆ ಅಂಟುವ ಮೊಬೈಲ್ ಹೋಲ್ಡರ್ ತುಂಬಾ ಉತ್ತಮ. ನಾನು ಪೋರ್ಟ್ರಾನಿಕ್ಸ್ ಅವರ ಈ ಎಸಿ ವೆಂಟ್ ಮೊಬೈಲ್ ಹೋಲ್ಡರ್ ಬಳಸುತ್ತಿದ್ದು ಅದು ನನಗೆ ಉತ್ತಮ ಸೇವೆ ನೀಡುತ್ತಿದೆ. ನೀವೂ ಕೂಡಾ ಅಮೇಜಾನ್ ಅಲ್ಲಿ ಒಮ್ಮೆ ಇದರ ವಿವರ ಇಲ್ಲಿ ನೋಡಬಹುದು.
ನೀವು ಯಾವ ಮೊಬೈಲ್ ಹೋಲ್ಡರ್ ಬಳಸ್ತೀರಾ? ಕಮೆಂಟ್ ಹಾಕಿ.
ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.