ನೀವು ವಿಡಿಯೋ ಕಂಟೆಂಟ್ ಕ್ರಿಯೆಟ್ ಮಾಡ್ತೀರಾ? ಅಥವಾ ಕಲಿಯಲು ಆಸೆ ಇದೆಯಾ? ನೀವು ಆನ್ ಲೈನ್ ಕಲಿಸಲು ನೋಡ್ತಾ ಇದೀರಾ? ಬನ್ನಿ ಒಂದೆರಡು ವಿಡಿಯೋ ಎಡಿಟಿಂಗ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟವೇರ್ ಬಗ್ಗೆ ತಿಳಿಯೋಣ. ಕೊನೆಯ ವರೆಗೆ ತಪ್ಪದೇ ಓದಿ.
{tocify} $title={ವಿಷಯ ಸೂಚಿ}
ಇಂದು ವ್ಲಾಗ್ಗಿಂಗ್ ಒಂದು ಟ್ರೆಂಡ್ ಆಗಿದೆ. ಎಲ್ಲರಿಗೂ ತಮ್ಮ ಅನುಭವ ಯೂಟ್ಯೂಬ್, ಇನ್ಸ್ಟಾಗ್ರಾಂ, ಟಿಕ್ ಟಾಕ್ ತದ್ರೂಪಿಗಳಲ್ಲಿ ವಿಡಿಯೋ ಹಂಚಿ ಸ್ಟಾರ್ ಆಗ ಬೇಕೆಂಬ ತವಕ.
ಅಷ್ಟೇ ಅಲ್ಲ ಇಂದು ಆನ್ ಲೈನ್ ಶಿಕ್ಷಣ ಕೂಡಾ ಜನಪ್ರಿಯ ಆಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿಗಳಿಗೂ ಅಂತರ್ಜಾಲ (ಇಂಟರ್ನೆಟ್) ಬಳಸಿ ಯೂಟ್ಯೂಬ್, ಉಡೆಮಿ ನಂತಹ ತಾಣಗಳಲ್ಲಿ ಕಲಿಸ ಬಹುದು.
ಇದಕ್ಕೆ ಮುಖ್ಯವಾಗಿ ಬೇಕಿರುವದು ವಿಡಿಯೋ ಎಡಿಟಿಂಗ್ ಹಾಗೂ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟವೇರ್ ಗಳು.
ಆಫ್ ಲೈನ್ ವಿಡಿಯೋ ಎಡಿಟಿಂಗ್ ಮಾಡಿ ನಂತರ ಅಪ್ ಲೋಡ್ ಮಾಡಲು ನಿಮಗೆ ಬೇಕಿರುವದು ವಿಡಿಯೋ ಎಡಿಟಿಂಗ್ ಸಾಫ್ಟವೇರ್. ಕಂಪ್ಯೂಟರ್ ತೆರೆಯ ಮೇಲೆ ಮಾಡುವ ಚಟುವಟಿಕೆಯನ್ನು ದಾಖಲಿಸಲು ಬೇಕು ಸ್ಕ್ರೀನ್ ರೆಕಾರ್ಡರ್.
ಇಂದು ನೀವು ಅದಕ್ಕೆ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಬಳಸಿ ವಿಡಿಯೋ ಎಡಿಟಿಂಗ್ ಮಾಡಬಹುದು.
ಸ್ಮಾರ್ಟ್ ಫೋನ್ ಬಳಸಿ ಬೀದಿಯಲ್ಲೇ ನಿಂತು ಲೈವ್ ಸ್ಟ್ರೀಮಿಂಗ್ ಮಾಡಬಹುದು. ಬೇಸಿಕ್ ಎಡಿಟಿಂಗ್ ಸಹ ಸ್ಮಾರ್ಟ್ ಫೋನ್ ಅಲ್ಲೇ ಮಾಡಬಹುದು. ಆದರೆ ಅಡ್ವಾನ್ಸ್ಡ್ ಎಡಿಟಿಂಗ್ ಮಾಡಲು ಲ್ಯಾಪ್ ಟಾಪ್ ಅನುಕೂಲಕರ.
ಸ್ಮಾರ್ಟ್ ಫೋನ್ ಎಪ್ ಗಳು
ಆರಂಭಿಕ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಸಿ ನಿಮ್ಮ ಚಾನೆಲ್ ಬೆಳೆದಾಗ ಲ್ಯಾಪ್ ಟಾಪ್ / ಡೆಸ್ಕ್ ಟಾಪ್ ಬಳಸುವದು ಉತ್ತಮ.ಇದರಿಂದ ಕಡಿಮೆ ಬಂಡವಾಳ ಸಾಕು.
ಶಕ್ತಿ ಶಾಲಿ ಜಿಪಿಯು ಇರುವ ಸ್ಮಾರ್ಟ್ ಫೋನ್ ಇದಕ್ಕೆ ಬಳಸಿ. ಇಲ್ಲದಿದ್ದರೆ ಸ್ಮಾರ್ಟ್ ಫೋನ್ ಅಲ್ಲಿ ವಿಡಿಯೋ ಎಡಿಟರ್ ಕ್ರ್ಯಾಶ್ ಆಗುವದು ಜಾಸ್ತಿ.
ಸ್ಮಾರ್ಟ್ ಫೋನ್ ಅಲ್ಲಿ ಕೈನ್ ಮಾಸ್ಟರ್, ಪವರ್ ಡೈರೆಕ್ಟರ್ ಹೀಗೆ ಹಲವು ಹಣ ನೀಡಿ ಬಳಸುವ ಎಪ್ ಗಳಿವೆ.
ಆದರೆ ಹಲವು ಮಿತಿಗಳು ಪ್ರತಿ ಎಪ್ ಅಲ್ಲಿವೆ. ಒಂದೇ ದುಬಾರಿ, ಇಲ್ಲಾಂದ್ರೆ ಯೂಸರ್ ಫ್ರೆಂಡ್ಲಿ ಅಲ್ಲ. ಎಲ್ಲ ಸರಿ ಇದ್ದರೆ ೪ಕೆ ವಿಡಿಯೋ ಎಡಿಟಿಂಗ್ ಮಾಡಲಾಗದು ಆದ್ರೂ ಪದೇ ಪದೇ ಕ್ರ್ಯಾಶ್ ಆಗುತ್ತೆ.
ಹಲವು ಎಪ್ ಬಳಸಿ ಪರಾಮರ್ಶಿಸಿದಾಗ ನನಗೆ ಇಷ್ಟ ಆಗಿದ್ದು ಈ ಕೆಳಗಿನ ಎಪ್ ಗಳು. ಟ್ರೈ ಮಾಡಿ. ಎಪ್ ಸ್ಟೋರ್ ಅಲ್ಲಿರೋ ಇನ್ನಿತರ ಎಪ್ ಸಹ ಬಳಸಿ ಆಮೇಲೆ ಒಂದನ್ನು ಫೈನಲ್ ಆಗಿ ಆರಿಸಿ.
೧. ವಿಎಲ್ ಎಲ್ ಓ ವಿಡಿಯೋ ಎಡಿಟರ್
೨. ವಿಎನ್ ವಿಡಿಯೋ ಎಡಿಟರ್
ಲ್ಯಾಪ್ ಟಾಪ್ ಸಾಫ್ಟವೇರ್ ಗಳು
ಈಗ ಲ್ಯಾಪ್ ಟಾಪ್ ನಲ್ಲಿ ಯಾವ ಯಾವ ವಿಡಿಯೋ ಎಡಿಟರ್ ಆಯ್ಕೆ ಇದೆ ತಿಳಿಯೋಣ.
ನೆನಪಿಡಿ ವಿಡಿಯೋ ಎಡಿಟಿಂಗ್ ಮಾಡಲು ಹೈ ಎಂಡ್ ಗ್ರಾಫಿಕ್ಸ್ ಕಾರ್ಡ್ ಹಾಗೂ ಉತ್ತಮ ಸ್ಕ್ರೀನ್ ಇರುವ ಉತ್ತಮ ಕಂಪ್ಯೂಟರ್ ಇರಬೇಕು. ಕಡಿಮೆ ಸಾಮರ್ಥ್ಯದ ಕಂಪ್ಯೂಟರ್ ಗಳಲ್ಲಿ ೪ಕೆ ಎಡಿಟಿಂಗ್ ಕಷ್ಟ, ಜಾಸ್ತಿ ಸಮಯ ತೆಗೆದು ಕೊಂಡೀತು.
ಲ್ಯಾಪ್ ಟಾಪ್ ವಿಡಿಯೋ ಎಡಿಟಿಂಗ್ ಸಾಫ್ಟವೇರ್ ಗಳು
ಮಾರುಕಟ್ಟೆಯಲ್ಲಿ ಹಲವು ವಿಡಿಯೋ ಏಡಿಟರ್ ಲಭ್ಯವಿದೆ. ಅವುಗಳಲ್ಲಿ ಮುಖ್ಯವಾದವು
- ಅಡೋಬೇ ಪ್ರಿಮಿಯರ್ ಪ್ರೋ
- ಆಪಲ್ ಫೈನಲ್ ಕಟ್ ಪ್ರೋ
- ಬ್ಲಾಕ್ ಮಾಜಿಕ್ ಡಾವಿನ್ಸಿ ರಿಸಾಲ್ವ್
- ಹಿಟ್ ಫಿಲಂ ಎಕ್ಸ್ಪ್ರೆಸ್ಸ್
- ಆಪಲ್ ಐಮೂವಿ
- ಫಿಲ್ಮೋರಾ
- ಶಾಟ್ ಕಟ್
- ಮೂವಾವಿ
- ವಿಂಡೋಸ್ ೧೧ ವಿಡಿಯೋ ಎಡಿಟರ್
ಲ್ಯಾಪ್ ಟಾಪ್ ಸ್ಕ್ರೀನ್ ರೆಕಾರ್ಡರ್ ಸಾಫ್ಟವೇರ್ ಗಳು
ನನ್ನ ಆಯ್ಕೆಯ ಲ್ಯಾಪ್ ಟಾಪ್ ಸಾಫ್ಟವೇರ್ ಗಳು
- ೪ಕೆ ಎಡಿಟಿಂಗ್ ಉಚಿತವಾಗಿ ಸಾಧ್ಯ .
- ಉಚಿತ ವರ್ಶನ್ ಗಳಲ್ಲಿ ಯಾವುದೇ ಮಿತಿ ಇಲ್ಲ. ೬ಕೆ ವಿಡಿಯೋ ಮಾಡಲು ಡಾವಿನ್ಸಿ ಲೈಸೆನ್ಸ್ ಖರೀದಿ ಮಾಡಬೇಕು.
- ವಿಂಡೋಸ್ / ಮ್ಯಾಕ್ / ಲಿನಕ್ಸ್ ಮೂರೂ ಆಪರೇಟಿಂಗ್ ಸಿಸ್ಟೆಮ್ ಅಲ್ಲಿ ಕೆಲಸ ಮಾಡುತ್ತವೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅನಿಸಿಕೆ ಏನು? ತಿಳಿಸಿ.